2,912 total views
ಗದಗ ಜಿಲ್ಲಾಧಿಕಾರಿಗಳ ಕಛೇರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ಮುತ್ತಿಗೆ ಹಾಗೂ ಪ್ರತಿಭಟನೆ ಕೈಗೊಳ್ಳಲಾಯಿತು.ಮಾನ್ಯ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವದರ ಮೂಲಕ ರಾಜ್ಯ ಸರ್ಕಾರವು ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರನ್ನು ಯಾವದೇ ಕಾರಣಕ್ಕೂ ನೀಡಬಾರದು ಒಂದು ವೇಳೆ ನೀಡಿದ್ದೆ ಆದಲ್ಲಿ ರಾಜ್ಯಾಧ್ಯದಂತ ಉಗ್ರವಾದ ಹೋರಾಟ ಮಾಡುತ್ತೇವೆ. ಕಾವೇರಿ ನೀರಿಗಾಗಿ, ಈ ನಾಡಿನ ನೆಲಕ್ಕಾಗಿ ರಕ್ತ ನೀಡಲು ನಾವು ಸದಾ ಸಿದ್ದರಿದ್ದೇವೆ. ಎಂದು ಗದಗ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಶರಣು ಗೋಡಿ ಹೇಳಿದರು. ಈ ಸಮಯದಲ್ಲಿ ಶ್ರೀ ಹನುಮಂತ ಅಬ್ಬಿಗೇರಿ (ರಾಜ್ಯ ಕಾರ್ಯದರ್ಶಿಗಳು ),ನಿಂಗನಗೌಡ ಮಾಲಿಪಾಟೀಲ್,ಶ್ರೀಮತಿ ಆಶಾ ಜುಳಗುಡ್ಡ,ಶ್ರೀ ಚೇತನ ಕಣವಿ,ಭರಮಣ್ಣ ಕಿಲ್ಲಾರಿ,ಮುತ್ತಣ್ಣ ಚೌಡಣ್ಣವರ್, ವಿರೂಪಾಕ್ಷ ಹಿತ್ತಲಮನಿ,ನಾಗಪ್ಪ ಅಣ್ಣಿಗೇರಿ ಮುಂತಾದವರು ಹಾಜರಿದ್ದರು.
ವರದಿ -ಸದಾಶಿವ ಭೀಮಪ್ಪ. ಮುಡೆಮ್ಮನವರ