2,559 total views
ಲೇಖಕಿ ಮತ್ತು ಗಾಯಕಿ, ಶಿಕ್ಷಕಿ,ಸಮಾಜಸೇವಕಿ, ಪತ್ರಕರ್ತೆಯಾಗಿ ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ, ಹಾಗೂ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕಿ ಆದಂತಹ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಬಹುಮುಖ ಪ್ರತಿಭೆ, ಇವರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು, ಲಯನ್ಸ್ ಕ್ಲಬ್ ಆಫ್ ಕೆಜಿಫ್ ಗೋಲ್ಡ್ ಮೆನ್ ಮತ್ತು ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ. ಹಾಸನದ ಖಾಸಗಿ ಶಾಲೆಯ ಪ್ರೌಢ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ್ದು ಅಂದಿನ ದಿನ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ. ಡಾ. ಎಸ್ ರಾಧಾಕೃಷ್ಣನ್ ಆದರ್ಶ ಶಿಕ್ಷಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. . ಹಾಸನದ ಶ್ರೀಮತಿ ಹೆಚ್. ಎಸ್ . ಪ್ರತಿಮಾ ಹಾಸನ್ ರವರನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಆಯ್ಕೆ ಮಾಡಿದ್ದರು .ಇವರಿಗೆ ಗೌರವಪೂರ್ಣಕವಾಗಿ ಸಿ.
ಎಂ. ಆರ್ ಶ್ರೀನಾಥ್ ಸಮಾಜಸೇವಕರು, ಶ್ರೀ ಬಿ ಶಿವಕುಮಾರ್ ರಾಜ್ಯದ್ಯಕ್ಷರು, ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು(ರಿ ) ಮತ್ತು ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಇವರು ಶ್ರೀಮತಿ ಹೆಚ್ಎಸ್ ಪ್ರತಿಮಾ ಹಾಸನ್ ರವರಿಗೆ ” ಡಾ. ಎಸ್ ರಾಧಾಕೃಷ್ಣನ್ ಆದರ್ಶ ಶಿಕ್ಷಕರ ರತ್ನ ಪ್ರಶಸ್ತಿ” ನೀಡಿ ಗೌರವಿಸಿದರು. ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಗೌರವ ನೀಡಿ ಸನ್ಮಾನ ಮಾಡಲಾಯಿತು ಇವರನ್ನು ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಕಲಾ ಕ್ಷೇತ್ರಗಳನ್ನು ಸೇವೆ ಗಮನಿಸಿ ಬಹುಮುಖ ಪ್ರತಿಭೆಯಾದ ಇವರು ಸದಾ ಕ್ರಿಯಾಶೀಲರಾಗಿದ್ದು ಇವರ ಶೈಕ್ಷಣಿಕ ಕ್ಷೇತ್ರದ ಸೇವೆಯನ್ನು ಗಮನಿಸಿ. ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇತ್ತೀಚಿಗೆ ಇವರಿಗೆ ಎಂ. ಡಿ ಸೊಸೈಟಿ ಮತ್ತು ಶ್ರೀ ಮೌನಟ್ರಿ ಹಿಂದಿ ವಿದ್ಯಾ ಪೀಠ ಪ್ರಾದೇಶಿಕ ಶಾಖೆ. ಛತ್ತೀಸಘಡ. ವತಿಯಿಂದ ಶಿಕ್ಷಣ ಶಿಲ್ಪಿ ಎಂಬ ರಾಷ್ಟ್ರೀಯ ಗೌರವ ಸಮ್ಮಾನ್ ಪ್ರಶಸ್ತಿ ದೊರಕಿದೆ ಇವರು ಹಲವಾರು ಹಂತಗಳ ಪರೀಕ್ಷೆ ನೀಡಿದ್ದು ಅದರನ್ನು ಯಶಸ್ವಿ ಗೊಳ್ಳಿಸಿದ ನಂತರ ಶಿಕ್ಷಣ ಶಿಲ್ಪಿ ರಾಷ್ಟ್ರೀಯ ಗೌರವ ಸಮ್ಮಾನ್ ಪ್ರಶಸ್ತಿಗೆ ಬಾಜಿ ನರಾಗಿದ್ದಾರೆ .ಕಿವುಡ ಮತ್ತು ಮೂಕ ಮಕ್ಕಳ ಚಟುವಟಿಕೆ ಕಲಿಸುವ ಪರಿಯು ಮೆಚ್ಚುಗೆಗೆ ಪಾತ್ರವಾಗಿದೆ. ಟಾಪ್ 2 ಆಗಿದ್ದಾರೆ ಹಲವಾರು ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.