2,564 total views
ಚಿತ್ರದುರ್ಗ: ಹತ್ತಾರು ವರ್ಷಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಬಡಕುಟುಂಬವೊಂದು ಸ್ವಂತ ಸೂರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಪತ್ರ ಬರೆದಿದೆ.ಚಿತ್ರದುರ್ಗ ಜಿಲ್ಲೆ ಭರಮಸಾಗರ ಗ್ರಾಮದ ಮಾರಪ್ಪ ಕುಟುಂಬ ಪತ್ರ ಬರೆದಿದೆ.ಮೀನು ಹಿಡಿಯುವ ಕಾಯಕ ಮಾಡುತ್ತಿರುವ ಮರಪ್ಪ 12 ಮಂದಿಯನ್ನ ಪೋಷಿಸುತ್ತಿದ್ದಾರೆ.ಸ್ವಂತ ನೆಲೆ ಇಲ್ಲದೆ ಗುಡಿಸಿಲಿನಲ್ಲಿ ಹಲವಾರು ವರ್ಷಗಳಿಂದ ಆಶ್ರಯ ಪಡೆದಿದ್ದಾರೆ.ಬಾಡಿಗೆ ಕಟ್ಟಲೂ ಸಹ ಶಕ್ತಿ ಇಲ್ಲದ ಮಾರಪ್ಪ ಮತ್ತೊಬ್ಬರ ಖಾಲಿ ಜಾಗದಲ್ಲಿ ಗುಡಿಸಿಲು ಕಟ್ಟಿಕೊಂಡು ವಾಸವಿದ್ದಾರೆ.ಜಾಗದ ಮಾಲೀಕರು ಗರಂ ಆದಾಗ ಮತ್ತೊಂದು ಜಾಗ ಹುಡುಕಿ ಗುಡಿಸಿಲು ಹಾಕಿಕೊಳ್ಳುತ್ತಿದ್ದಾರೆ.ಕಳೆದ ಹಲವು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಮಾರಪ್ಪರವರ ಕುಟುಂಬಕ್ಕೆ ಸ್ವಂತ ಸೂರಿಗಾಗಿ ಸರ್ಕಾರದ ಯಾವುದೇ ಯೋಜನೆ ನೆರವಿಗೆ ಬಂದಿಲ್ಲ.ಯಾವ ಜನಪ್ರತಿನಿಧಿಯೂ ಇವರ ಅಳಲು ಕೇಳಿಲ್ಕ.ಇದೀಗ ಮುಖ್ಯಮಂತ್ರಿಗಳ ಮೊರೆ ಹೋಗಿರುವ ಮಾರಪ್ಪ