2,914 total views
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಎತ್ತುಗಳಲ್ಲಿ, ಒಂದು ಮೃತಪಟ್ಟರೆ ಇನ್ನೊಂದು ಗಾಯಗೊಂಡಿರುವ ಮಂಗಳವಾಗ ಬೆಳಿಗ್ಗೆ 10:00 ನಡೆದಿದೆ. ಯಾಳಗಿ ಗ್ರಾಮದ ರೈತ ಶ್ರೀಶೈಲ ಮಹಾಮನಿ ಎನ್ನುವರಿಗೆ ಸೇರಿದ್ದ ಎತ್ತುಗಳಿಗಿದ್ದು, ಜಮೀನು ಕೆಲಸ ಮುಗಿಸಿ ಕೊಟ್ಟಿಗೆಯಲ್ಲಿ ತನ್ನ ಎತ್ತುಗಳನ್ನು ಕಟ್ಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಯಾದಗಿರಿ ಜಿಲ್ಲೆಯ ಉಸ್ತಾವರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಉದ್ಯಮಿಗಳು ಸಚಿವರಾದ ಸನ್ಮಾನ್ಯ ಶ್ರೀ. ಶರಣಬಸಪ್ಪಗೌಡ ದರ್ಶನಪುರ್ ರವರು ಸರಕಾರದಿಂದ ಆ ಬಡ ರೈತರಿಗೆ ಸೂಕ್ತವಾದ ಪರಿಹಾರ ಧನ ನೀಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ವರದಿ ಕಾಸಿಂಸಾಬ್