2,605 total views
ಶಿಡ್ಲಘಟ್ಟ ತಾಲೂಕಿನ ಸಾದಲಿನ ಹೋಬಳಿ ತಲಕಾಯಲಬೆಟ್ಟ ವ್ಯಾಪ್ತಿಯ ಸರ್ವೇ ನಂಬರ್ 58 ,60ರಲ್ಲಿ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಾರೆ ಎಂಬ ಜನರ ಆರೋಪ ಹಿನ್ನೆಲೆಯಲ್ಲಿ ಶಾಸಕ ಬಿ ಏನ್ ರವಿಕುಮಾರ್ ರವರ ನೇತೃತ್ವದಲ್ಲಿ ಸೋಮವಾರ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ, ಹಾಗೂ ರೈತರ ನಡುವೆ ಸಂಧಾನ ಸಭೆ ನಡೆಸಿದರು. ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗಳನ್ನು ವಶಕ್ಕೆ ಪಡೆಯುತ್ತಿರುವ ಅರಣ್ಯ ಅಧಿಕಾರಿಗಳು ರೈತರ ವಿರುದ್ಧ ದೂರುಗಳನ್ನು ದಾಖಲಿಸುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಬಿ ಏನ್ ರವಿಕುಮಾರ್ ರವರು ಮಾತನಾಡಿ ರೈತರಿಗೆ ಮಂಜುರಾದ ಜಮೀನು ಅನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂಬ ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ಸಭೆಗೆ ಕರೆಯಲಾಗಿದೆ. ರೈತರಿಗೆ ಮಂಜೂರು ಆಗಿರುವ ಜಮೀನು ಅನ್ನು ವಶಪಡಿಸಿಕೊಂಡ ಕಾರಣ ರೈತರಿಗೆ ತೊಂದರೆಯಾಗಿದೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಶೇಕಡಾ 26. 5 ರಷ್ಟು ಅರಣ್ಯ ಭೂಮಿ ಇದೆ. ಇನ್ನುಳಿದ ಶೇಕಡ 33.3ರಷ್ಟು ಗೋಮಾಳ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂಬ ಆದೇಶದಿಂದ ರಾಜ್ಯದಂತ ಅರಣ್ಯ ಅಧಿಕಾರಿ ಗಳು ಜಮೀನು ವಸಪಡಿಸಿಕೊಳ್ಳಲು ಹೊರಟಿದ್ದಾರೆ ಎಂದರು. ಸ್ವಾತಂತ್ರ್ಯೋತ್ಸವದ ಬಳಿಕ ಸಾವಿರಾರು ರೈತರಿಗೆ ಜಮೀನು ಮಂಜುರಾಗಿದ್ದು. ಆ ಜಮೀನುಗಳಲ್ಲಿ ಕೊಳವೆಬಾವಿ, ಕೊರೆಸಿ ವ್ಯವಸಾಯ ಮಾಡುತ್ತಿದ್ದಾರೆ ಎಂದರು. ಅರಣ್ಯ ಅಧಿಕಾರಿಗಳು ಜಮೀನು ವಶಕ್ಕೆ ಪಡೆಯುವ ಮುನ್ನ ರೈತರಿಗೆ ನೋಟಿಸ್ ನೀಡಬೇಕು. ಕಂದಾಯ ಅಧಿಕಾರಿಗಳ ಜೊತೆಗೆ ಸರ್ವೇ ಮಾಡಿ ಕೊಳ್ಳಬೇಕು ಎಂದರು..
ವರದಿ ವೆಂಕಟೇಶ್ ಸಿ