2,893 total views
ಹಾಸನದ ವಿವೇಕಾನಂದ ಸಭಾಂಗಣದಲ್ಲಿ ಪ್ರತಿಮಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಟಾನದ ವತಿಯಿಂದ ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜ್ ಕುಮಾರ್ ಎಂಬ ಶೀರ್ಷಿಕೆಯಡಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನ್ನಾಡುತ್ತಾ ಈ ಸಾಹಿತ್ಯವೆಂಬ ಮಾನಸ ಸರೋವರದಲ್ಲಿ ಮಿಂದೇಳಬೇಕು. ಮನಸ್ಸು ಮತ್ತು ದೇಹ ಎರಡೂ ಶುದ್ಧಗೊಳ್ಳುತ್ತವೆ.ಕಾವ್ಯ ರಚಿಸುವುದು ಸಾಮಾನ್ಯವಾದ ವಿಷಯವಲ್ಲ. ಸಾಹಿತ್ಯದ ಪರಿಚಾರಿಕೆ ಮಾಡಬೇಕು. ಹೃದಯ ಮತ್ತು ಮೆದುಳು ಎರಡರ ಸಂಮಿಳಿತದಿಂದ ರಚಿತವಾದ ಸಾಹಿತ್ಯ ಗಟ್ಟಿಸಾಹಿತ್ಯವಾಗಿ ಸರ್ವರ ಮನ ಮುಟ್ಟುತ್ತದೆ. ಇಂದು ಉದಯೋನ್ಮಖ ಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವಾಗ ಬಹಳಷ್ಟು ಅರಿತಿರಬೇಕು. ನಂತರ ಕಾವ್ಯ ರಚಿಸಬೇಕು ಎಂದು ಮನಸ್ಸಿಗೆ ಮುದ ನೀಡುವ ಏಕೈಕ ಕ್ಷೇತ್ರವೆಂದರೆ ಅದು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನ್ನಾಡಿದ ನೀಲಮ್ಮ ಸುರೇಶರವರು ಎಷ್ಟೇ ಅಡೆತಡೆ ಬಂದರು ದೃಢ ನಿರ್ದಾರ ಗಟ್ಟಿಯಾಗಿರಬೇಕು. ಒಂದು ಸಂಸ್ಥೆಯನ್ನು ನಡೆಸುವುದು ಸಾಮಾನ್ಯವಲ್ಲ. ಸಂಸ್ಥೆ ವ್ಯಕ್ತಿಗೆ ಅನಿವಾರ್ಯ ಅದೇ ಸಂಸ್ಥೆಗೆ ವ್ಯಕ್ತಿ ಅನಿವಾರ್ಯವಲ್ಲ. ಸದುದ್ದೇಶ ಇಟ್ಟುಕೊಂಡು ಸಂಸ್ಥೆಯನ್ನು ಕಟ್ಟಿದ್ದೇ ಆದಲ್ಲಿ ಅದರ ಫಲಾನುಭವಿಗಳು ಲಕ್ಷಾಂತರ ದಾಟುವುದರಲ್ಲಿ ಅನುಮಾನವಿಲ್ಲ ಎಂದರು. ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ನೊಂದವರಿಗೆ ಮತ್ತು ತುಳಿತಕ್ಕೆ ಒಳಗದವರಿಗೆ , ಅವಕಾಶ ವಂಚಿತರಿಗಾಗಿ ಕೆಲಸ ಮಾಡುವ ಉದ್ದೇಶವಿದೆ ಎಂದರು.
ಯಾರ ಸಹಕಾರವಿಲ್ಲದೆ ಬೆಳೆದಿರುವ ಪ್ರತಿಮಾ ಹಾಸನ್. ಇನ್ನ ಮುಂದೆ ಕುಟುಂಬದವರು ಜೊತೆಯಾಗಿ ನಿಂತು ಸಹಕಾರ ನೀಡಿ ಕಾರ್ಯ ಮಾಡಲಿದೆ ಎಂದರು. ಸಾಧನೆ ಮಾಡುವ ಶಕ್ತಿ ಇರುವ ಇವರಿಗೆ ಇಷ್ಟು ದಿನ ಸಹಾಯ ನೀಡಿರಲಿಲ್ಲ ಇನ್ನ ಮುಂದೆ ಮಾಡುವ ಒಳ್ಳೆ ಕೆಲಸಕ್ಕೆ ನಾವು ಜೊತೆಗೆ ಇರುತ್ತೇವೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಗೊರೂರು ಅನಂತರಾಜು ಲೇಖಕಿ ಪ್ರತಿಮಾ ಹಾಸನ ಸುದುದ್ದೇಶ ಇಟ್ಟುಕೊಂಡು ಒಂದು ಸಾಹಿತ್ಯಕ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇವರಿಗೆ ಯಶಸ್ಸು ಸಿಗಲಿ. ಇಂತಹ ನೂರಾರು ಕಾರ್ಯಕ್ರಮಗಳನ್ನು ನಡೆಸಲಿ.ಈ ವೇದಿಕೆಯಿಂದ ಹಿರಿಯ ಸಾಹಿತಿಗಳೋಟ್ಟಿಗೆ ಉದಯೊಣ್ಮುಖರನ್ನು ಬೆಳೆಸುವ ಕೈಂಕರ್ಯ ಮಾಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚಿಸಿದರು.ಯಶಸ್ವಿಯಾಗಿ ಕವಿಗೋಷ್ಠಿ ನಡೆದಿದ್ದು ಎಲ್ಲಾ ಅತಿಥಿಗಳನ್ನು ಮತ್ತು ಸಾಹಿತಿಗಳನ್ನು, ನೃತ್ಯ ಮಾಡಿದ, ಹಾಡು ಹಾಡಿದ ಎಲ್ಲರಿಗೂ ಸನ್ಮಾನ ಮಾಡಲಾಯಿತು. ಹಲವು ತಂಡದವರು ಪುನೀತ್ ರಾಜ್ ಕುಮಾರ್ ಕುರಿತು ಗೀತೆಗಳನ್ನು ಹಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಸೋಮಾನಾಯಕ್ ಮತ್ತು ಚಿದಾನಂದ್ ರವರನ್ನು ಸನ್ಮಾನಿಸಲಾಯಿತು. ಟೀಷ್ಮಾ ಗೌಡ ಕೆ. ಆರ್ ಮತ್ತು ಕೆ ಆರ್ ಮೋಹನ್ ಗೌಡ ನೃತ್ಯ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ಮತ್ತು , ಹೆಚ್ ಎಸ್ ಮಂಜುನಾಥ್, ದೇವರಾಜ್ ಹೆಚ್ ಪಿ, ಸಿದ್ದಯ್ಯ, ಕೊಟ್ರೇಶ್ ಉಪ್ಪಾರ್, ಸುಂದರೇಶ್ ಉಡುವೆರೆ,ಪುಟ್ಟಣ್ಣ, ರಮೇಶ್ ಡಿ, ಮಾಳಟೇರ ಸೀತಮ್ಮ, , ಶುಭಮಂಗಳ, ಗೀತಾ ತಿಪ್ಪೇಸ್ವಾಮಿ, ರತೀಶ್, ರವಿಕಿರಣ್, ಸಾವಿತ್ರಿ ಬಿ ಗೌಡ, ಸಾವಿತ್ರಮ್ಮ ಓಂ ಕಾರ್,ಮೊಹಮದ್ ರಪಿ, ಪಿ,ಶೇಖರ್,ಇನ್ನಿತರರು ಉಪಸ್ಥಿತರಿದ್ದರು.