2,678 total views
ನಂಜನಗೂಡು: ಆಧಾರ್ ಕಾರ್ಡ್ ತಿದ್ದುಪಡಿ ಮಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಪ್ರಾಪ್ತಳನ್ನ ವಿವಾಹವಾದ ಆರೋಪ ನಂಜನಗೂಡು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಶಾಲಾ ದಾಖಲಾತಿಗಳನ್ನ ಒದಗಿಸಿದ ಗ್ರಾಮಸ್ಥರು ಅಪ್ರಾಪ್ತಳನ್ನ ವಿವಾಹವಾದ ಗ್ರಾಮ ಪಂಚಾಯ್ತಿ ಅಧ್ಯಕ್ಷನ ವಿರುದ್ದ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.ಹಾಡ್ಯ ಗ್ರಾಮ ಪಂಚಾಯ್ತು ಅಧ್ಯಕ್ಷ ಹರೀಶ್ ಕುಮಾರ್ ಮೇಲೆ ಇಂತಹ ಆರೋಪ ಕೇಳಿ ಬಂದಿದೆ.ಫೆಬ್ರವರಿ 2023 ರಲ್ಲಿ ಅರಿಯೂರು ಗ್ರಾಮದ ಅಪ್ರಾಪ್ತ ಬಾಲಕಿಯ ಜೊತೆ ನಂಜನಗೂಡಿನ ಕಲ್ಯಾಣಮಂಟಪದಲ್ಲಿ ಅದ್ದೂರಿ ವಿವಾಹ ನಡೆದಿತ್ತು.ಶಾಲಾ ದಾಖಲಾತಿಗಳ ಪ್ರಕಾರ ಮಧುಮಗಳು ಇನ್ನೂ ಅಪ್ರಾಪ್ತೆ.ಆದರೆ ಆಧಾರ್ ಕಾರ್ಡ್ ನಲ್ಲಿ ವಯಸ್ಸನ್ನ ತಿದ್ದುಪಡಿ ಮಾಡಿ ವಯಸ್ಕಳಂತೆ ತಿದ್ದುಪಡಿ ಮಾಡಿದ್ದಾರೆಂದು ಅರಿಯೂರು ಗ್ರಾಮಸ್ಥರೇ ದೂರು ನೀಡಿದ್ದಾರೆ.ಶಾಲಾ ದಾಖಲಾತಿಗಳನ್ನ ಒದಗಿಸಿರುವ ಗ್ರಾಮಸ್ಥರು ಹರೀಶ್ ಕುಮಾರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ..