2,179 total views
ಯಡ್ರಾಮಿ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ರಸ್ತೆಯು ಸಂಪೂರ್ಣ “ಜೇಡಿ “ಮಣ್ಣಿನಿಂದ ಕೂಡಿದ ಮಣ್ಣಿನ “ಮಡಿಕೆ “ಮಾಡುವ ಕೆಸರಿನ ಗದ್ದೆಯಂತಾಗಿದೆ. ಇಲ್ಲಿ ಪ್ರತಿನಿತ್ಯ ಪಟ್ಟಣದ ನೂರಾರು ಜನರು ಅಲೆದಾಡುವ ಪ್ರಮುಖ ಮುಖ್ಯ ರಸ್ತೆಯಾಗಿದ್ದು. ಈ ಎಪಿಎಂಸಿ ರಸ್ತೆಯು ಯಡ್ರಾಮಿಯ ಕೊನೆಯ ಭಾಗದಲ್ಲಿದೆ ಯಡ್ರಾಮಿಯ ಪಟ್ಟಣದ ಲಾಸ್ಟ್ ಬೌಂಡ್ರಿ ಇದ್ದು ಇಡೀ ಯಡ್ರಾಮಿ ಪಟ್ಟಣದ ಚರಂಡಿಯ ಹಾಗೂ ನಳದ ನೀರು ಪೋಲಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ಗೋಧಾಮು ಒಳಗಡೆ ಹರಿದು ಹೋಗಿ ಹಳ್ಳ ಸೇರುತ್ತವೆ ಆದರೆ ಈ ಮಾರ್ಗಕ್ಕೆ ಒಂದೇ ಚರಂಡಿ ವ್ಯವಸ್ಥೆ ಇದೇ ಅದು ಹಳ್ಳಕ್ಕೆ ಸೇರುತ್ತದೆ ಅದು ಕಸ ಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ನಿಂತು ಗಬ್ಬು ವಾಸನೆ ಬರುತ್ತದೆ ಆ ಚರಂಡಿಯ ನೀರು ಸಹ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ಕಡೆ ಮುಖ ಮಾಡಿ ಹರಿದು ಹೋಗುತ್ತದೆ ಹೀಗಾಗಿ ಯಡ್ರಾಮಿ ಪಟ್ಟಣದ ಜನರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸನ್ನಿವೇಶ ಎದುರಾಗಿದೆ. ಯಡ್ರಾಮಿಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ರಸ್ತೆಯು ಬೆಂಗಳೂರಿನ ಕಟ್ಟ ಕಡೆಯ ಕೆಂಗೇರಿಯ ಮೋರಿಯಂಥಾಗಿದೆ…! ಯಡ್ರಾಮಿಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ರಸ್ತೆ…! ಗೋಧಾಮು ಒಳಗಡೆ ಹಾಗೂ ಎರಡು ಗೋಧಾಮಿನ ಅಕ್ಕಪಕ್ಕದಲ್ಲಿ ಜಾಲಿ ಮುಳ್ಳಿನ ಗಿಡ ಗಂಟೆಗಳು ಬೆಳೆದು ದಟ್ಟ “ಕಾಡಾಗಿ” ಪರಿವರ್ತನಗೊಂಡು ಹಾವು ಚೇಳುಗಳು ತಿರುಗಾಡುವ ತಾಣವಾಗಿ ಮಾರ್ಪಟ್ಟಿದೆ ಆದರೆ ಈ ಸ್ಥಳದಲ್ಲಿ ಚಿಕ್ಕ ಮಕ್ಕಳು ವೃದ್ಧರು ವಿದ್ಯಾರ್ಥಿ ವಿದ್ಯಾರ್ಥಿನಿಯರು ರೈತರು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾದ ಸನ್ನಿವೇಶ ಎದುರಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ಯಡ್ರಾಮಿ ತಾಲೂಕಿನ ರೈತರಿಗೆ ವರವಾಗಬೇಕಾಗಿತ್ತು .ಆದರೆ ಶಾಪವಾಗಿ ಪರೀಣಮಿಸಿದೆ ಸುಮಾರು 40 ವರ್ಷಗಳ ಹಿಂದೆಯೆ ಯಡ್ರಾಮಿ ತಾಲೂಕಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಧಿಕಾರ ಮಂಜೂರು ಮಾಡಿದ್ದು ಅದಕ್ಕಾಗಿ “ಬೃಹತ್ ಆಕಾರದ”ಎರಡು ಗೋದಾಮುಗಳು ನಿರ್ಮಾಣಗೊಂಡಿವೆ ಆದರೆ ಅದನ್ನು ಸಮರ್ಪಕವಾಗಿ ಬಳಕೆಯಾಗಲೆಯಿಲ್ಲಾ…! ಒಂದು ಗೋದಾಮು BSNL ಕಚೇರಿಯನ್ನಾಗಿ ಪರಿವರ್ತನೆ ಮಾಡಿದ್ದರೆ ಇನ್ನೊಂದು ಗೋಧಾಮು ಕೆಲವು ದಿನಗಳ ಕಾಲ ಸರಕಾರಿ ತೊಗರಿ ಸಾಗಾಣಿಕೆ ಕೇಂದ್ರವನ್ನಾಗಿ ಮಾರ್ಪಾಡಾಗಿತ್ತು.!ತದನಂತರ ಈ ಸ್ಥಳವು ರಾಸಾಯನಿಕ ಗೊಬ್ಬರ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಅಷ್ಟೇ ಅಲ್ಲದೆ ಇನ್ನೊಂದು ಗೋಧಾಮು ಅಂದರೆ BSNLಕೇಂದ್ರವಾದ ಗೋಧಾಮು ಈಗ ಆಧಾರ್ ಕಾರ್ಡ್ ಕಚೇರಿ ಆಗಿ ಮಾರ್ಪಟ್ಟಿದೆ ಮುಂದೆ ಈ ಸ್ಥಳ ಏನಾಗುವುದು! ಗೊತ್ತಿಲ್ಲ…? *ಕಾಲಾಯ ತಸ್ಮೈ ನಮಃ ಜೇವರ್ಗಿ ಕ್ಷೇತ್ರದ
” ಜನಪ್ರತಿನಿಧಿಯ ಹಿಂಬಾಲಕರ ಇಚ್ಚಾ ಶಕ್ತಿಯ ಕೊರತೆಯೋ.?ಅಥವಾ ನಿರಾಸಕ್ತಿಯೊ.?ಅಥವಾ ಪಟ್ಟಣ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷ ಧೋರಣೆಯೊ.? ಇದಕ್ಕೆಲ್ಲಾ ಕಾರಣವಿರಬಹುದು. ಎಂದು ಯಡ್ರಾಮಿ ಪಟ್ಟಣದ ಸ್ಥಳೀಯ ಸಾರ್ವಜನಿಕರು ಈ ಅವ್ಯವಸ್ಥೆಯ ವಿರುದ್ದ ಧ್ವನಿಯತ್ತಿದ್ದಾರೆ.ಹಾಗೂ ಯಡ್ರಾಮಿ ಪಟ್ಟಣದಲ್ಲಿ ಎರಡು “ಬೃಹತ್” ಆಕಾರದ ಗೋದಾಮುಗಳಿವೆ ಎನ್ನುವ ಸಾಮಾನ್ಯ ಮಾಹಿತಿಯು ಸಂಬಂಧಪಟ್ಟ ‘ಇಲಾಖೆಯ ಅಧಿಕಾರಿಗಳಿಗೆ ‘ಇಲ್ಲವೇ ಎನ್ನುವುದು. ಯಕ್ಷಪ್ರಶ್ನೆಯಾಗಿದೆ.? ಎಂದು ಯಡ್ರಾಮಿ ಪಟ್ಟಣದ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ .?ಇನ್ನು ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಅವರಿಗೆ ಸೂಕ್ತ. ಮಾಹಿತಿಯನ್ನು ನೀಡಿ.ನಾವುಗಳೆ ಅಧಿಕಾರಿಗಳನ್ನು,ಕರೆತಂದು, ವೀಕ್ಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ…!ಇಂತಹ,ದೂಸ್ಥಿತಿ. ವಿಪರ್ಯಾಸವೇಸರಿ..! ಎಂದು ಯಡ್ರಾಮಿ ಪಟ್ಟಣದ ಸ್ಥಳೀಯರು ತಮ್ಮ ಅಸಮಾಧಾನವನ್ನು ಪತ್ರಿಕಾ ಪ್ರಕಟಣೆ ಮೂಲಕ ಹೊರ ಹಾಕಿದ್ದಾರೆ.! ವರದಿ:*ವಿಜಯಕುಮಾರ್ ಜೆ ಮಲ್ಲೇದ್