2,609 total views
ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕ್ ಪಂಚಾಯತ್ ಸಮನ್ವಯ ಅಧಿಕಾರಿಗಳು ಕಾರ್ಯಾಲಯ ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ. ಸಮೂಹ ಸಂಪನ್ಮೂಲ ಕೇಂದ್ರ ದಾಸನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಕೊಪ್ಪ ಇವರ ಆಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-2024ನೇ ಸಾಲಿನ ದಾಸನಕೊಪ್ಪ ಕಸ್ಟಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯನ್ನು ದಿನಾಂಕ=7/9/2023 ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಬದನಗೋಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಟರಾಜ ಬಿ ಹೊಸೂರು ದೀಪ ಬೆಳಗು ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರಾದ ಮಾರುತಿ ಮಟ್ಟೇರ್.ಮಕ್ಕಳ ಉತ್ಸಾಹದ ಚಿಲುಮೆಗೆ ಇರಲಿ ನಮ್ಮೆಲ್ಲರ ಪ್ರೋತ್ಸಾಹದ ಒಲುಮೆ, ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ, ಕ್ಲಸ್ಟರ ಮಟ್ಟದಿಂದ ರಾಷ್ಟ್ರಮಟ್ಟದವರಿಗೆ ಮಕ್ಕಳು ಭಾಗವಹಿಸಿ ಶಾಲೆಗೆ ಹಾಗೂ ಪಾಲಕರಿಗೆ, ದೇಶಕ್ಕೆ ಕೀರ್ತಿ ತರುವಂತಾಗಬೇಕು ಜೀವನದಲ್ಲಿ ಸೋತು ಗೆಲ್ಲಬೇಕು ಆಗ ಗೆಲುವು ಶಾಶ್ವತ ಆಗುತ್ತೆ ಎಂದು ಮಕ್ಕಳಿಗೆ ಉತ್ಸಾಹ ತುಂಬಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಭದ್ರ ಗೌಡ್ರು, ಲೋಕೇಶ್ ನೇರಲಗಿ, ಲಕ್ಷ್ಮಿ ಚರಂತಿಮಠ, ಮಾಬುಬಲಿ ವರದಿ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ್ ಪಾಟೀಲ್. ಉರ್ದು ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪೈಜುಲ್ಲಾ ಕಲ್ಲಾಪುರ್ ಮಂಜುನಾಥ್ ಈ ಪಾಟೀಲ್ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ ಶೇಟ್, ಸಹ ಶಿಕ್ಷಕರಾದ ಮಾಲತೇಶ್. ಮತ್ತು ವಸಂತ್ ನಾಯ್ಕ್ ಹಾಗೂ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಲಸ್ಟರ್ ಮಟ್ಟದ ಶಾಲಾ ಶಿಕ್ಷಕರು, ಬಿ ಎಲ್ ಓ ಕವಿತಾ, ಮತ್ತು ಅಧ್ಯಕ್ಷರು/ ಸದಸ್ಯರು ಪಾಲಕ ಪೋಷಕರು ಶಾಲಾ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗಳು ಕುಪ್ಪಗಡ್ಡೆ ಹೊಸಕೋಪ್ಪ ಸುತ್ತಮುತ್ತಲಿನ ಊರ ಗ್ರಾಮಸ್ಥರು ಉಪಸ್ಥಿತರಿದ್ದರು. ಎಲ್ಲರ ಸಹಕಾರ ದಿಂದ್ ಎಲ್ಲರಿಗೂ ಊಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ ಶೇಟ್ ಕಾರ್ಯಕ್ರಮವನ್ನು ಚಂದಗಾಣಿಸಿ ತನು ಮನ ದನ ಶ್ರಮ ವಹಿಸಿದವರಿಗೆ ಗೌರವಿಸಿ ಸನ್ಮಾನಿಸಿ, ವಂದನಾರ್ಪಣೆ ಮಾಡಿದರು.