2,902 total views
ಕಲಬುರಗಿ:- ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್‍ರವರ ಹುಟ್ಟು ಹಬ್ಬದ ನಿಮಿತ್ಯ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ ಹೊಗಾಡೆ, ಶ್ರೀ ಗುರುಲಿಂಗಸ್ವಾಮಿ ಮಠಪತಿ ಹಾಗೂ ಶ್ರೀ ವಿಶ್ವನಾಥ ಪಾಟೀಲ ಅವರು ಧ್ಯಾನಚಂದ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ನೆರವೇರಿಸಿದರು. “ಧ್ಯಾನ್ ಚಂದ್ ಎಂಬ ದ್ರುವ ತಾರೆ ಈಗ ಬದುಕಿದ್ದರೆ, ಭಾರತದಲ್ಲಿ ಕ್ರೀಡಾ ಜಗತ್ತನ್ನು, ಜಾಹೀರಾತು ಜಗತ್ತನ್ನು ಆಳುತ್ತಿರುವ ಕ್ರಿಕೆಟ್ ಪಟುಗಳು ಕೂಡ ಹಿಂದೆ ಸರಿಯುವಂತಹ ಪರಿಸ್ಥಿತಿ ನಿರ್ಮಾಣವಾದರು ಅಚ್ಚರಿ ಇರುತ್ತಿರುಲಿಲ್ಲ. ಇಂದು ಒಲಿಂಪಿಕ್‍ನಲ್ಲಿ ಕಂಚಿನ ಪದಕವೋ, ಬೆಳ್ಳಿಯ ಪದಕವೋ ಬಂದರೆ ಮುಂದಿನ ಒಲಂಪಿಕ್‍ವರೆಗೂ ಸಂಭ್ರಮಿಸುತ್ತೇವೆ, ಹೀಗಿರುವಾಗ ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಒಂದಲ್ಲ, ಎರಡಲ್ಲ ಸತತ ಮೂರು ಒಲಿಂಪಿಕ್‍ಗಳಲ್ಲಿ ಚಿನ್ನ ಗೆದ್ದು ಕೊಟ್ಟ ಧ್ಯಾನ್‍ಚಂದ್‍ರ ಸಾಧನೆ ಸಾಧಾರಣವಲ್ಲ. ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯರು. ಅವರ ಹಾಕಿ ಆಟಕ್ಕೆ ಮನಸೋಲದವರೇ ಇಲ್ಲ. ತಮ್ಮ ಅದ್ಭುತ ಆಟದಿಂದಾಗಿ ಎದುರಾಳಿ ತಂಡದವರನ್ನು ಮತ್ತು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಧ್ಯಾನ್‍ಚಂದ್ ನಿಜವಾಗಿಯೂ ಭಾರತೀಯರ ಹೆಮ್ಮೆ” ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಕ್ರಿಡಾ ನಾಯಕರಾದ ಕುಮಾರ ಅಭಿಷೇಕ ಟಿ.ಜಿ ಹಾಗೂ ಕುಮಾರಿ ಸುಷ್ಮಿತಾ ಹಾಗೂ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರಾದ ಶ್ರೀ ನಾಗರಾಜ ಗುತ್ತೇದಾರ, ರಾಜು ಸದ್ಲಾಪುರ, ಸಿದ್ರಾಮ, ಪೂಜಾ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ತರು, ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.
ವರದಿಗಾರರು -ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್.