2,905 total views
ಮಂಡ್ಯ ಲಾಂಗ್ ಹಿಡಿದ ವಿಧ್ಯಾರ್ಥಿಯೊಬ್ಬ ಕಾಲೇಜಿಗೆ ಬಂದು ಉಪನ್ಯಾಸಕರಿಗೆ ಆವಾಜ್ ಹಾಕಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ನಡೆದಿದೆ.
ತರಗತಿಗೆ ಬರುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ್ದ ಉಪನ್ಯಾಸಕನಿಗೆ ಲಾಂಗ್ ತೋರಿಸಿ ಧಂಕಿ ಹಾಕಿದ ವೀಡಿಯೋ ವೈರಲ್ ಆಗಿದೆ.
ಕುಣಿಗಲ್ ತಾಲೂಕಿನ ಅವರೇಗೆರೆ ಗ್ರಾಮದ ಉದಯ್ ಗೌಡ (18) ಲಾಂಗ್ ತೋರಿಸಿದ ವಿದ್ಯಾರ್ಥಿ.ಉಪನ್ಯಾಸಕ ಚಂದನ್ ರವರು ದೂರು ನೀಡಿದ್ದರು.
ಲಾಂಗ್ ಹಿಡಿದು ಬಂದ ಘಟನೆ ವಿಡಿಯೋವನ್ನ ವಿಧ್ಯಾರ್ಥಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಈ ಕುರಿತಂತೆ
ಬೆಳ್ಳೂರು ಪೊಲೀಸ್ ಠಾಣೆಗೆ ಉಪನ್ಯಾಸಕ ಚಂದನ್ ದೂರು ನೀಡಿದ್ದರು.ನಂತರ
ಪೋಷಕರೊಂದಿಗೆ ಬಂದು ಉದಯ್ ಗೌಡ ಕ್ಷಮೆಯಾಚಿಸಿದ್ದಾನೆ.
ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.