2,196 total views
ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪಗ್ಗೆ ಇಂಡೋನೇಷಿಯಾ ಜಕರ್ತಾಗೆ ಆಯ್ಕೆಯಾದ ಕಲ್ಬುರ್ಗಿ ನಗರದ ಪಟು ಗಜಾನನ ದೇವಿಕಾರ.
ಕಲ್ಬುರ್ಗಿ ಸುದ್ದಿ ಕಲ್ಬುರ್ಗಿ ಜಿಲ್ಲೆಯ ಆದರ್ಶ ನಗರದ ನಿವಾಸಿ 41 ವರ್ಷದ ಯುವಕ ಗಜಾನನ ದೇವಿಕರ್ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್ ಅವರು ಆಲ್ ಇಂಡಿಯಾ ಶೀಟೋರಿಯೊ ಕರಾಟೆ (ಡು) ಯೂನಿಯನ್ ಅವರ ವತಿಯಿಂದ ಜುಲೈ ತಿಂಗಳಿನಲ್ಲಿ ದಿನಾಂಕ 15ರಿಂದ 17-7-2023 ರಂದು ಎರಡು ದಿನದ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರು ನಗರದಲ್ಲಿ ಹಮ್ಮಿಕೊಂಡ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯ ಓಪನ್ ಕುಮೀತೆಯಲ್ಲಿ ಪ್ರಶಸ್ತಿ ಪದಕ ಗೆದ್ದುಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಜೇನ್ನ ಶೀಟೋರಿಯೋ ಕರಾಟೆ ಅಸೋಸಿಯೇಷನ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರು ಶಿಹಾನ್ ದಶರಥ ದುಮ್ಮನ್ಸೂರ್ ಹರ್ಷ ವ್ಯಕ್ತಪಡಿಸಿದ್ದಾರೆ ಇದುವರೆಗೂ ನಮ್ಮಿಂದ ಹಲವಾರು ಯುವಕ ಯುವತಿಯರು ತರಬೇತಿ ಪಡೆದುಕೊಂಡು ರಾಷ್ಟ್ರಮಟ್ಟ ರಾಜ್ಯಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಅದೇ ರೀತಿಯಾಗಿ ನಮ್ಮ ವಿದ್ಯಾರ್ಥಿಯಾದ ಗಜಾನನ ದೇವಿಕರ ಅವರು ಸಪ್ಟಂಬರ್ ತಿಂಗಳಿನಲ್ಲಿ 19 ರಿಂದ 24 ರ ವರೆಗೆ ನಡೆಯಲಿರುವ ಇಂಡೋನೇಷಿಯಾದ ಜಕರ್ತ ದಲ್ಲಿ ಭಾರತೀಯ ತಂಡದ ಪರವಾಗಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ: ವಿಜಯಕುಮಾರ್ ಜೆ ಮಲ್ಲೇದ