2,610 total views
ಹುಣಸೂರು ಟ್ರಾಕ್ಟರ್ ಗಳನ್ನ ಬಾಡಿಗೆಗೆ ಪಡೆದು ಖಾಸಗಿ ವ್ಯಕ್ತಿಗಳ ಬಳಿ ಗಿರವಿ ಇಟ್ಟು ಪಾಲಾಯನ ಮಾಡುತ್ತಿದ್ದ ಖದೀಮನನ್ನ ಹುಣಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ನಂದೀಶ್ ಬಂಧಿತ ಆರೋಪಿ.ರಾಮು ಎಂಬುವರು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು.ಕಂತು ಕಟ್ಟಲು ಸಾಧ್ಯವಾಗದೆ ಇರುವ ಸಂಧರ್ಭದಲ್ಲಿ ಆರೋಪಿ ನಂದೀಶ್ ಸಂಪರ್ಕಿಸಿ ಟ್ರಾಕ್ಟರ್ ಬಾಡಿಗೆ ಪಡೆದಿದ್ದಾರೆ. ಕಂತು ಕಟ್ಟುವ ಜವಾಬ್ದಾರಿಯನ್ನ ನಂದೀಶ್ ಹೊತ್ತು ಟ್ರಾಕ್ಟರ್ ಕೊಂಡೊಯ್ದು ಖಾಸಗಿ ವ್ಯಕ್ತಿಯೊಬ್ಬರ ಬಳಿ ಗಿರವಿಗೆ ಇಟ್ಟಿದ್ದಾನೆ.ಆದ್ರೆ ಇಬ್ಬರ ನಡುವಿನ ಮಾತುಕತೆ ಪ್ರಕಾರ ಫೈನಾನ್ಸ್ ಗೆ ನಂದೀಶ್ ಕಂತು ಪಾವತಿಸಿಲ್ಲ. ಫೈನಾನ್ಸ್ ನವರು ಹಣಕ್ಕಾಗಿ ರಾಮು ಮೇಲೆ ಒತ್ತಡ ಹೇರಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.ನಂದೀಶ್ ಸಂಪರ್ಕಕ್ಕೆ ಸಿಗದೆ ಸತಾಯಿಸಿದ್ದಾನೆ.ವಂಚನೆಗೆ ಒಳಗಾದ ರಾಮು ಹುಣಸೂರು ಪೊಲೀಸ್ ಠಾಣೆಯಲ್ಲಿ ನಂದೀಶ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಹಲವಾರು ಮಂದಿಗರ ನಂದೀಶ್ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸಧ್ಯ ಹುಣಸೂರು ಪೊಲೀಸರು ಹತ್ತು ಟ್ರಾಕ್ಟರ್ ಗಳನ್ನ ವಶಕ್ಕೆ ಪಡದು ಆರೋಪಿ ನಂದೀಶ್ ನ ಬಂಧಿಸಿದ್ದಾರೆ…