1,310 total views
ಶಹಾಬಾದ:- ನಾಲವಾರ ವಲಯದ ಕೊಲ್ಲೂರ ಗ್ರಾಮದ ಉತ್ಸಾಹಿ ಯುವಕ ರಾಜು ಕೊಲ್ಲೂರ ಅವರು ನಟಿಸಿ, ನಿರ್ಮಿಸಿದ “ಜಿವ್ನಾ ಅಂದ್ರೆ ಇಷ್ಟೇನಾ” ಕಿರು ಚಿತ್ರದ ಟ್ರೈಲರ್‍ನ್ನು ಸೂಗೂರ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಹಿರಗಪ್ಪ ತಾತನವರು ಶುಕ್ರವಾರ ಬಿಡುಗಡೆಗೊಳಿಸಿದರು.
ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿ ಮಾತನಾಡಿದ ಪೂಜ್ಯರು ಸಮಾಜದ ಯುವಕರು ಸಣ್ಣ ವಯಸ್ಸಿನಲ್ಲಿಯೇ ವ್ಯಸನಿಗಳಾಗಿ, ಪ್ರೀತಿ ಪ್ರೇಮ ಹೆಸರಲ್ಲಿ ಹೆಣ್ಣು ಪಡುವ ಪಾಡು, ದುಶ್ಚಟಕ್ಕೆ ಬಲಿಯಾದವರ ಸ್ಥಿತ ಗತಿ ಕುರಿತು ಸಮಾಜಿಕ ಸಂದೇಶ ಸಾರುವ ಈ ಕಿರು ಚಿತ್ರ ಸಾಮಾಜಿ ಜಾಲ ತಾಣಗಳಲ್ಲಿ ಯಶಶ್ವಿಯಾಗಲಿ ಎಂದು ಹಾರೈಸಿದರು.
ಯುವಕರಿಗೆ ಸಾಮಾಜಿಕ ಸಂದೇಶ ಸಾರುವ ಈ ಕಿರು ಚಿತ್ರದಲ್ಲಿ ರಾಜು ಕೊಲ್ಲೂರ ನಾಯಕರಾಗಿದ್ದು, ಲಕ್ಷ್ಮೀ ಯಾದಗಿರಿ ನಾಯಕಿಯಾಗಿದ್ದಾಳೆ, ಭೀಮರಾಯ ಮಲ್ಲಾರೆಡ್ಡಿ ನಿರ್ಧೇಶಿಸಿದ್ದುಮ, ಮಹೇಶ ನಾಯ್ಕಲ ಸಂಗೀತ ನೀಡಿದ್ದಾರೆ. ದೇವರಾಜ ಯಾಲಿ ಮಾರ್ಗದರ್ಶನ ಮಾಡಿದ್ದಾರೆ
ವರದಿಗಾರರು-ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್