1,552 total views
ಶ್ರೀ ಭೋಜಲಿಂಗೇಶ್ವರ ದೇವರ ಮಠದ ಪೀಠಾಧಿಪತಿಗಳು ಶ್ರೀ ಶ್ರೀ ಶ್ರೀ ಹಿರಗಪ್ಪ ತಾತನವರ ಹಸ್ತದಿಂದ ಜೀವ್ನ ಅಂದ್ರೆ ಇಷ್ಟೇನಾ…? ಕಿರುಚಿತ್ರದ ಟೀಸರ್ ರೀಲಿಸ್….
ಕಲಬುರಗಿ: ಜಿಲ್ಲೆಯ ಸೂಗೂರ ಎನ್ ಗ್ರಾಮದ ಆರಾಧ್ಯ ದೈವ ಶ್ರೀ ಭೋಜಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ಪೀಠಾಧಿಪತಿಗಳು ಶ್ರೀ ಹಿರಗಪ್ಪ ತಾತನವರ ಹಸ್ತದಲ್ಲಿ ದಿನಾಂಕ : 04-08-2023 ರಂದು ಜೀವ್ನಾ ಅಂದ್ರೆ ಇಷ್ಟೇನಾ….? ಎಂಬ ಕಿರುಚಿತ್ರವು ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಒಂದು ಉತ್ತಮ ಮಾದರಿಯ ಕಿರುಚಿತ್ರವಾಗಿದ್ದು…. ಈ ಕಿರುಚಿತ್ರದ ಟ್ರೈಲರ್ ಅನ್ನು ಶ್ರೀಗಳು ರೀಲಿಸ್ ಮಾಡುತಿದ್ದಾರೆ….. ಎಂದು ಮೂಲಗಳು ತಿಳಿಸಿವೆ….
. ಉತ್ತರ ಕರ್ನಾಟಕದ ಹಳ್ಳಿ ಪ್ರತಿಭೆಗಳು ಈ ಒಂದು ಸಣ್ಣ ಪ್ರಯತ್ನಕ್ಕೆ ಕೈ ಹಾಕಿದ್ದು ಕರುನಾಡ ಜನರು ಇವರಿಗೆ ಆಶಿರ್ವದಿಸಿ ಈ ಕಿರುಚಿತ್ರವನ್ನು ಯಶಸ್ವಿಯಾಗಿಸಬೇಕಾಗಿದೆ… ಪ್ರತಿಯೊಬ್ಬರಿಗೂ ಕುತೂಹಲ ಮೂಡಿಸಿರುವ ಈ ಚಿತ್ರ ತುಂಬಾ ನ್ಯಾಚೂರಲ್ ಆಗಿ ಸಖ್ಖತ್ ಸೌಂಡ್ ಮಾಡುತ್ತಿದೆ ಎಂದು ಜನರು ಮಾತನ್ನಾಡಿಕೊಳ್ಳುತ್ತಿದ್ದಾರೆ…. ಈ ಚಿತ್ರವು ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿ ಬರಲಿದೆ ಹಾಗೂ ಇದರ ನಿರ್ದೇಶಕರಾಗಿ ಭೀಮರಾಯ ಮಲ್ಲಾರೆಡ್ಡಿ ಹಾಗೂ ಮಹೇಶ ನಾಯ್ಕಲ್ ಶಿರವಾಳ ರವರ ಸಂಗೀತದಲ್ಲಿ ಮೂಡಿದೆ ಮತ್ತು ಈ ಚಿತ್ರದ ನಾಯಕ ನಟರಾಗಿ ಅಭಿನಯಿಸಿದ ಹಳ್ಳಿ ಪ್ರತಿಭ ರಾಜೇಂದ್ರ. ಎನ್.ಕೊಲ್ಲೂರು ರವರು ಮಿಂಚಿದ್ದಾರೆ ಹಾಗೂ ನಾಯಕಿಯಾಗಿ ಕ್ವೀನ್ ಆಫ್ ಯಾದಗಿರಿ ಲಕ್ಷ್ಮೀ ಯವರು ಸಾಥ್ ನೀಡಿದ್ದಾರೆ… ಗ್ರಾಮೀಣ ಭಾಗದ ಯುವಕರು ಮೊಟ್ಟಮೊದಲ ಬಾರಿಗೆ ತಮ್ಮದೇ ಆದ ಟೀಮ್ ಮಾಡಿಕೊಂಡು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ…