1,946 total views
ಬೆಂಗಳೂರು:- ಮನೀಷ್ ಶೆಟ್ಟಿ ನಿರ್ದೇಶನದ ಬ್ಯಾಡ್ ಸ್ಟೋರಿ ಕನ್ನಡ ಕಿರುಚಿತ್ರದ ಟೀಸರ್ ಜುಲೈ 25ರಂದು ಬಿಡುಗಡೆಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು ನಿರೀಕ್ಷೆ ಮೂಡಿಸಿದೆ.
ನಾಯಕನೋ… ಖಳ ನಾಯಕನೋ ಅನ್ನೋದು ಕೊನೆವರೆಗೂ ಕುತೂಹಲದಲ್ಲಿ ಚಿತ್ರವನ್ನು ನೋಡುವಂತೆ ಮಾಡುತ್ತದೆ. ಮನೀಷ್ ಶೆಟ್ಟಿ ಅವರ 15ನೇ ಕಿರುಚಿತ್ರ ಇದಾಗಿದ್ದು, ಸ್ವತಃ ಅವರೇ ಕಥೆ ಬರೆದು, ಅಭಿನಯ ಮಾಡುವುದರೊಂದಿಗೆ ನಿರ್ದೇಶಕನ ಕ್ಯಾಪ್ ಕೂಡ ತೊಟ್ಟಿದ್ದಾರೆ. ಇವರಿಗೆ ಕಲಾವಿದರಾಗಿ ಇಮ್ರಾನ್ ಮುರುಳಿ ,ಮೌನೇಶ್ ರಾಠೋಡ್,ಲಕ್ಷಿತ ಪೂಜಾರಿ ಕೂಡ ಸಾಥ್ ನೀಡಿದ್ದಾರೆ. ಗಾಂಜಾ, ಮರ್ಡರ್ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಬೀಟ್ ಸುಜೀತ್ ಸಂಗೀತ್ ಒದಗಿಸಿದ್ದಾರೆ. ಮೂವಿ ಕ್ಯಾಪ್ಚರ್ ಸ್ಟುಡಿಯೋ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.