2,246 total views
ಬೆಳಗಾವಿ ೨೫ : ದಿನಾಂಕ ೨೫.೦೬.೨೦೨೩ ರ ರವಿವಾರದಂದು ಬೆಳಗಾವಿ ನಗರದ ಗಾಂಧಿ ಭವನದಲ್ಲಿ ನಮ್ಮ ನೆಚ್ಚಿನ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಜಿ ರವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ೯ ವರ್ಷ ಪೂರ್ಣಗೊಳಿಸಿ ೧೦ನೇ ವರ್ಷಕ್ಕೆ ಪಾಧಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲೆ ಮತ್ತು ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯು ಜರುಗಿತು.
ಸಭೆಯಲ್ಲಿ ಭಾರತದ ಪ್ರಧಾನಿಗಳಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿ ರವರ ಕೇಂದ್ರ ಸರ್ಕಾರವು ೯ ವರ್ಷಗಳ ಕಾಲ ಮಾಡಿರುವ ಜನಪರ ಯೋಜನೆಗಳನ್ನು ಹಾಗೂ ಅವರ ಅಭಿವೃದ್ದಿ ಕಾಮಗಾರಿಗಳನ್ನು ಮನೆಮನಕ್ಕೆ ತಲುಪಿಸುವ ಮತ್ತು ಕೆಂದ್ರ ಸರ್ಕಾರದ ಯಶಸ್ವಿ ಯೋಜನೆಗಳಾದ ಬೇಟಿ ಬಚಾವೋ, ಬೇಟಿ ಪಡಾವೋ, ಹೆಣ್ಣು ಮಕ್ಕಳ ರಕ್ಷಣೆ, ಜನ್-ದನ್ ಯೋಜನೆ, ಹರ ಘರ ಬಿಜಲಿ ಯೋಜನೆ, ಸಂಸದರರ ಆದರ್ಶ ಗ್ರಾಮ ಯೋಜನೆ, ಭಾರತದ ಉದ್ಯಮಶೀಲತಾ ಶಕ್ತಿಯನ್ನು ಹೊರಹೊಮ್ಮಿಸುವುದು, ನಮಾಮಿ ಗಂಗೆ, ಭಾರತದ ಅಭಿವೃಧ್ದಿ ಪಲಪಡಿಸುವಿಕೆ, ಭಾರತದ ಆರ್ಥಿಕತೆಗೆ ವೇಗ ಹೆಚ್ಚಿಸುವುದು, ಸಮೃದ್ದ ಭಾರತಕ್ಕಾಗಿ ರೈತರ ಸಬಲೀಕರಣ, ಹಿಂದೆAದೂ ಕಾಣದ ಪಾರದರ್ಶಕತೆಯತ್ತ ಮತ್ತು ಭವ್ಯ ಭವಿಷ್ಯದತ್ತ ಭಾರತದ ಜೋಡಣೆ, ಎಲ್ಲರಿಗೂ ಸೂರು ಯೋಜನೆ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ವಿವಿಧ ರಾಜ್ಯಗಳ ಸಬಲೀಕರಣ, ಸ್ವಚ್ಛ ಭಾರತದೆಡೆಗೆ ಒಯ್ಯುವುದು ಸೇರಿದಂತೆ ಹಲವಾರು ಜನಪರ ಯೋಜನೆಗಳ ಯಶಸ್ಸು ಹಾಗೂ ಮುಂಬರುವ ದಿನಗಳಲ್ಲಿ ದೇಶದ ಭವಿಷ್ಯಕ್ಕೆ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿ ಅವರ ಚಿಂತನ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸನ್ಮಾನ್ಯ ಶ್ರೀ. ಬಸವರಾಜ ಬೊಮ್ಮಾಯಿ ರವರು ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಹಿರಿಯರು ಮತ್ತು ಮಾಜಿ ರಾಜ್ಯ ಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ, ಸಂಸದರರಾದ ಮಂಗಳಾ ಸುರೇಶ ಅಂಗಡಿ, ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವರುಗಳಾದ ಬೈರತಿ ಬಸವರಾಜ, ಮುರಗೇಶ ನಿರಾಣಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಅನಿಲ ಬೆನಕೆ, ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಸಂಜಯ ಪಾಟೀಲ, ರಾಜ್ಯ ಸಭಾ ಸದಸ್ಯರಾದ ಈರಣ್ಣಾ ಕಡಾಡಿ, ಶಾಸಕರುಗಳಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಬೆಳಗಾವಿ ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಶೋಭಾ ಸೋಮಾನಾಚೆ, ಉಪಮಹಾಪೌರ ರೇಷ್ಮಾ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಉಜ್ವಲಾ ಬಡವಾನಾಚೆ, ರಾಜ್ಯ ವಕ್ತಾರರಾದ ಎಮ್. ಬಿ. ಜಿರಲಿ, ಚಂದ್ರಶೇಖರ ಕವಟಗಿ, ಎ. ಎಸ್. ಪಾಟೀಲ ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.