2,071 total views
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೊತ್ಸವವು ಸರಸ್ವತಿ ಪೂಜಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು . ಅಕ್ಷರ ಬಂಡಿಯಲ್ಲಿ 1 ನೇಯ ತರಗತಿಯ ವಿದ್ಯಾರ್ಥಿಗಳನ್ನು ಕೂಡ್ರಿಸಿಕೊಂಡು ಶೈಕ್ಷಣಿಕ ಘೋಷಣೆ ಕೂಗುತ್ತಾ ಪ್ರಭಾತ ಪೇರಿ ಮಾಡುತ್ತಾ ಅದ್ದೂರಿಯಾಗಿ ನೆರೆವೆರಿತು. ದಾಲ್ಮೀಯಾ ಸಿಮೆಂಟ್ಸ ಭಾರತ ಲಿಮಿಟೆಡ್ ಇವರು ಸರ್ಕಾರಿ ಶಾಲೆಗೆ ನೀಡಿದ ಫಿಲ್ಟರ್ ನೀರಿನ ಘಟಕವನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರು ಹಾಗೂ ಶಾಲಾ ಮುಖ್ಯೋಪಾದ್ಯಯರು ಪೂಜೆ ಮಾಡಿ ಉದ್ಘಾಟನೆ ಮಾಡಿದರು. ಇದೆ ಸಂದರ್ಭದಲ್ಲಿ ಒಂದನೇಯ ತರಗತಿಯ ಮಕ್ಕಳಿಗೆ ಹೂಗಳನ್ನು ನೀಡಿ ಶಾಲಾ ಶಿಕ್ಷಕರು ಶಾಲೆಗೆ ಬರಮಾಡಿಕೊಂಡರು . ಶಾಲೆಗೆ ಆಗಮಿಸಿದ ಮಕ್ಕಳಿಗೆ ಹಾಗೂ ಅತಿಥಿಗಳಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರು ಶ್ರೀ ಹಣಮಂತಣ್ಣ ಹ್ಯಾಗಾಡಿ, ಸದಸ್ಯರಾದ ಶ್ರೀ ಗೊಲಪ್ಪ ಕಾಗವಾಡ, ಶ್ರೀ ಮಲ್ಲಪ್ಪ ಸತ್ತಿಗೇರಿ, ಶ್ರೀ ಬಸವರಾಜ ಶಹಾಪೂರಮಠ , ಶ್ರೀಮತಿ ದ್ರಾಕ್ಷಾಯಣಿ , ಶ್ರೀ ಬಡಿಗೇರ, ಮತ್ತು ಶಾಲೆಯ ಮುಖ್ಯ ಗುರುಗಳಾದ ಎಸ್ಆರ್. ಅಂಬಲಿಮಠ , ಶ್ರೀಮತಿ ಎಸ್.ಬಿ. ರಜಪೂತ ಶ್ರೀ ಎಚ್.ಜಿ. ಅಮಲಝೇರಿ ಶ್ರೀಮತಿ. ಎಸ್ಎಮ್.ಪಾಟೀಲ ಹಾಗೂ ಶಾಲೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.