1,336 total views
ಚಿತ್ತಾಪೂರ:- ನಾಲವಾರ ವಲಯದ ಸುಗೂರ ಎನ್ ಗ್ರಾಮದ ಯುವಕ , ಹಡಪದ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಅವರ ಸಮಾಜದ ಸೇವೆಯನ್ನು ಗುರುತಿಸಿ ಸ್ಟಾರ್ ರೆಕಾಡ್೯ ಬುಕ್ ಆಫ್ ಇಂಟರ್ ನ್ಯಾಷನಲ್ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮಲ್ಲಿಕಾರ್ಜುನ ಅವರು ವೃದ್ದರು.ಅನಾಥರಿಗೆ .ಅಂಧರಿಗೆ.
ಅಂಗವಿಕಲರಿಗೆ. ಶಾಲಾ ಮಕ್ಕಳಿಗೆ.ಕಟ್ಟಡ್ ಕಾರ್ಮಿಕರಿಗೆ.
ನಿರ್ಗತಿಕರಿಗೆ.ಪೌರ ಕಾರ್ಮಿಕರಿಗೆ. ಹಿರಿಯ ವೃದ್ದರಿಗೆ. ಮೂಕರಿಗೆ. ಸೇರಿ ಹಲವು ವಲಯದ ಜನತೆಗೆ ಆರು ಭಾರಿ ಉಚಿತ ಕ್ಷೌರ ಸೇವೆ ನೀಡಿದ್ದಾರೆ.ಅಲ್ಲದೆ ಹಲವು ಸಮಾಜಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಹೀಗಾಗಿ ರಾಜಸ್ಥಾನದ ಮಾನವ ಹಕ್ಕುಗಳ ಹಾಗೂ ಸಮಾಜಿಕ ನ್ಯಾಯ ಮಂಡಳಿ ಅಡಿಯಲ್ಲಿರುವ ಅಂತರ್ ರಾಷ್ಟ್ರೀಯ ಸ್ಟಾರ್ ರೆಕಾಡ್೯ ಬುಕ್ ಸಂಸ್ಥೆಯ ಮೌಲ್ಯಮಾಪನ ಮಂಡಳಿ ,ಆಧ್ಯಾಪಕರ ಶಿಪಾರಸಿನ ಮೇರೆಗೆ ಮೇ -೧೫ ರಂದು ಜೈಪೂರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.