1,934 total views
ಆನ್ ಲೈನ್ ಆಪ್ ಗಳಲ್ಲಿ ಲೋನ್ ಪಡೆಯುವ ಪ್ಲಾನ್ ಹಾಕಿದ್ದೀರಾ ಹಾಗಿದ್ರೆ ಹುಷಾರ್.ನೀವು ಬ್ಲಾಕ್ ಮೇಲ್ ಗೆ ಒಳಗಾಗೋದು ಖಚಿತ.ಮೈಸೂರಿನ ಅತಿಥಿ ಉಪನ್ಯಾಸಕರೊಬ್ಬರಿಗೆ ಇಂತಹ ಕಹಿ ಘಟನೆ ನಡೆದು ರಕ್ಷಣೆಗಾಗಿ ಸೆನ್ ಪೊಲೀಸರ ಮೊರೆ ಹೋಗಿದ್ದಾರೆ.ಮಾನಸಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಚಂದ್ರಗುಪ್ತ ರವರಿಗೆ ಇಂತಹ ಕಹಿ ಘಟನೆ ನಡೆದಿದೆ.ಸೂಪರ್ ಲೋನ್ ಆಪ್ ನಲ್ಲಿ ಸಾಲ ಪಡೆದ ಚಂದ್ರಗುಪ್ತ ರವರನ್ನ ಬ್ಲಾಕ್ ಮೇಲ್ ಮಾಡಿ ಹಣ ಕಸಿಯುವ ಯತ್ನ ನಡೆಸಿದ ಕಿಡಿಗೇಡಿಗಳಿಗೆ ಸೆನ್ ಪೊಲೀಸರು ಬ್ರೇಕ್ ಹಾಕಿದ್ದಾರೆ.ಕೇವಲ ಮೂರು ಸಾವಿರ ಸಾಲ ಪಾಡೆಯಲು ಮುಂದಾದ ಚಂದ್ರಗುಪ್ತ ಇನ್ನಿಲ್ಲದ ಕಿರಿ ಕಿರಿ ಅನುಭವಿಸಿದ್ದಾರೆ.ಮೂರು ಸಾವಿರ ಸಾಲಕ್ಕಾಗಿ ಆಪ್ ನವರು ಕೇಳಿದ ದಾಖಲೆಗಳನ್ನ ಕೊಟ್ಟಿದ್ದಾರೆ.ದಾಖಲೆ ಕೊಟ್ಟ ಮರುಕ್ಷಣವೇ ಮೇ 20 ರಂದು ಮೂರು ಸಾವಿರ ಬದಲಾಗಿ ಕೇವಲ 1800 ರೂ ಜಮಾ ಮಾಡಿದ್ದಾರೆ.ಜಮಾ ಮಾಡಿದ ಏಳು ದಿನಗಳಿಗೆ ಅವಧಿ ಮುಗಿದಿದೆ ಹಣ ಹಿಂದಿರುಗಿಸಬೇಕೆಂದು ಮೆಸೇಜ್ ಹಾಕಿದ್ದಾರೆ.1800 ರೂ ಪಾವತಿಸಿದ ನಂತರ ಮತ್ತೆ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ.ಪಡೆದ 1800 ಸಾಲಕ್ಕೆ ಮೂರು ಸಾವಿರ ಪಾವತಿಸಿದ್ದರೂ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದಾರೆ.ಹಣ ಕೊಡಲು ನಿರಾಕರಿಸಿದಾಗ ಚಂದ್ರಗುಪ್ತ ರವರ ಅಕೌಂಟ್ ಹ್ಯಾಕ್ ಮಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ ನಂತರ ಅಶ್ಲೀಲ ಫೋಟೋ ಒಂದನ್ನ ಕ್ರಿಯೇಟ್ ಮಾಡಿ ಸ್ನೇಹಿತರು ಹಾಗೂ ಸಂಭಂಧಿಕರಿಗೆ ರವಾನಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.ಕೂಡಲೇ ಚಂದ್ರಗುಪ್ತ ರವರು ಮೈಸೂರು ನಗರದ ಸೆನ್ ಠಾಣೆ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾರೆ.ಸೆನ್ ಪೊಲೀಸರ ಸಲಹೆ ಪಡೆದ ನಂತರ ಆಪ್ ನವರ ಬ್ಲಾಕ್ ಮೇಲ್ ನಿಂದ ಬಚಾವ್ ಆಗಿದ್ದಾರೆ.ಅನಾಮಧೇಯ ಆಪ್ ಗಳಲ್ಲಿ ಸಾಲ ಪಡೆಯುವ ಮುನ್ನ ಮುಂದಾಗುವ ಪ್ರಮಾದಗಳ ಬಗ್ಗೆ ಒಮ್ಮೆ ಚಿಂತಿಸುವುದು ಒಳಿತು.