1,962 total views
ಲೇಖನಿ ಹಿಡಿದಾ ಮೇಲೆ ಇವರು……||ಪ|
ಸುಳ್ಳನ್ನು ”ಸುಟ್ಟು” ಹಾಕುತಾ
ಸತ್ಯವನ್ನು ”ಹುಟ್ಟು”ಹಾಕುತಾ
ಮುಳ್ಳಿನ ಮೇಲೆಯೇ ನಡೆದರೂ……||೧||
ಹೂ, ಮೇಲೆ ನಡೆದವರಂತೆ ನಡೆದು…||ಪ||
ಕನಸಿನ ಭಾರತ ಮನಸ್ಸಲಿ ಇಟ್ಟು
ನೊಂದವರಿಗೆ ‘ನೆರವು’ ನೀಡುತಾ
ಬಡವರ ಧ್ವನಿಯಾಗಿ ಘರ್ಜಿಸುವರು..||೨||
ನಾಡ ನುಡಿಯ ನೆಲ, ಜಲ, ರಕ್ಷಿಸುತಾ..||ಪ||
ಹಗುರ್ ಹಗುರವಾಗಿ ಮಾತ್ನಾಡಿದರೆ
ತಮ್ಮ ಲೇಖನಿಯಿಂದ ಬುದ್ದಿ ಕಲಿಸುತಾ
ಕನ್ನಡಾಂಭೆ ಮಗನಾಗಿ ನಡೆಯುವರು..||೩||
ಟೊಳ್ಳು ಪೊಳ್ಳು ಮಾತಿಗೆ ಮಣಿಯದೆ..||ಪ||
ನಿಖರವಾದ ಸುದ್ದಿಯನು ಹಂಬಿಸುತಾ
ಕನಸಿನ ಭಾರತ ಕಟ್ಟಲೇ ಬೇಕು ಎನ್ನುತಾ
ಹಠ ಬಿಡದೇ ಸಿಡಿಲಿನಂತೆ ಗುಡುಗುವರು..||೪||
ಪ್ರೇಮ ಕವಿ ಗುಡ್ಡಪ್ಪ. ಬಿ ಉಜ್ಜಿನಿ