1,996 total views
ಪುತ್ತಿಗೆ ಮಠದ “ಅಕ್ಕಿ ಮುಹೂರ್ತ” ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಭಾಗಿ
ಮುಂಬರುವ ಪರ್ಯಾಯದ ಪೂರ್ವ ತಯಾರಿಗಾಗಿ ಇಂದು ದಿನಾಂಕ 25-05-2023 ರಂದು ಪುತ್ತಿಗೆ ಮಠದಲ್ಲಿ “ಅಕ್ಕಿ ಮಹೂರ್ತ” ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶ್ರೀ ಕೆ. ರಘುಪತಿ ಭಟ್ ಭಾಗವಹಿಸಿದರು. ಪರ್ಯಾಯಕ್ಕೆ ಅಕ್ಕಿ ಅತ್ಯವಶ್ಯಕವಾಗಿರುವುದರಿಂದ ಇಂದು “ಅಕ್ಕಿ ಮುಹೂರ್ತ” ನೆರವೇರಿಸಲಾಯಿತು. ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಆಶೀರ್ವಚಿಸಿದರು.