4,192 total views
ಬೆಂಗಳೂರು: ಬಿಜೆಪಿ ಕರ್ನಾಟಕ ರೈತ ಮೋರ್ಚಾ ವತಿಯಿಂದ ಅವಲೋಕನ ಸಭೆಯನ್ನು ಬೆಂಗಳೂರಿನ ಈಡನ್ ಪಾರ್ಕ್ ಹೋಟೆಲ್ನಲ್ಲಿ ಇಂದು ಆಯೋಜಿಸಲಾಯಿತು. ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ ಅವರು ಈ ಸಭೆಯ ನೇತೃತ್ವ ವಹಿಸಿದ್ದರು.
ರಾಜ್ಯ ಪದಾಧಿಕಾರಿಗಳಿಂದ ವಿಭಾಗವಾರು ವರದಿಯನ್ನು ಪಡೆದುಕೊಂಡು ಸದ್ಯಕ್ಕೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ನಿರ್ಧರಿಸಲಾಯಿತು.
ಕೇಂದ್ರ ಸರ್ಕಾರದ ಯಶಸ್ವಿ 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೇ 30 ರಿಂದ ಜೂನ್ 30ರವರೆಗೆ ಲಾಭಾರ್ತಿಗಳ ಸಭೆಯನ್ನು ನಡೆಸುವ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕೆಂದು ನಿರ್ಧರಿಸಲಾಯಿತು. ಕಳೆದ ಮೂರು ವರ್ಷ ಅವಧಿಯಲ್ಲಿ ಉಲ್ಲೇಖನಿಯ ಸಂಘಟನಾತ್ಮಕ ಕಾರ್ಯಕ್ರಮಗಳ ವರದಿಯನ್ನು ಹಾಗೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಕುರಿತು ಅವಲೋಕನ ಸಭೆ ನಡೆಸಲಾಯಿತು. ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ರಾಜ್ಯ ರೈತ ಮೋರ್ಚಾ ಮಾಧ್ಯಮ ಸಂಚಾಲಕರು, ರಾಜ್ಯ ರೈತ ಮೋರ್ಚಾ ಖಜಾಂಚಿ ಸೇರಿದಂತೆ ಎಲ್ಲ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.