1,857 total views
ಶಿಡ್ಲಘಟ್ಟ ತಾಲೂಕಿನ ಕಸಬಾ ಹೋಬಳಿಯ ವೈ ಹುಣಸೆನಹಳ್ಳಿ, ಕೊತ್ತನೂರು, ತುಮ್ಮನಹಳ್ಳಿ, ಆನೂರು ಪಂಚಾಯಿತಿ ಮತ್ತು ಜಂಗಮಕೋಟೆ ಹೋಬಳಿಯ ಚೀಮಂಗಳ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ಎರಡು ಹೋಬಳಿಯ ಗ್ರಾಮಗಳಲ್ಲಿ ದ್ರಾಕ್ಷಿ, ಮಾವು, ದಾಳಿಂಬೆ, ರೇಷ್ಮೆ, ಹೂವು ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದ್ದು ರೈತರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನೂತನ ಶಾಸಕ ಬಿ. ಎನ್ ರವಿಕುಮಾರ್ ಮಾತನಾಡಿ ನೆನ್ನೆ ಸುರಿದ ಮಳೆಯಿಂದ ನೂರಾರು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಮಾವು, ಟಮೊಟೊ ದಾಳಂಬಿ, ರೇಷ್ಮೆ ಮತ್ತು ಹೂವು ಬೆಳೆಗಳು ಸಾಕಷ್ಟು ಹನಿಗೊಳಗಾಗಿದ್ದೆ. ವಾಣಿಜ್ಯ ಬೆಳೆಗಳಿಗೆ ವಿಮಾ ಸೌಲಭ್ಯವಿದ್ದು ಒಂದು ಎಕರೆಗೆ 80,000 ಸಾವಿರ ಪಡೆಯುವ ಅವಕಾಶವಿದೆ. ಇಂತಹ ಯೋಜನೆಗಳನ್ನು ರೈತರಿಗೆ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸಿ ರೈತರಿಗೆ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರು ಸಾಲ ಸೋಲ ಮಾಡಿ ಬೆಳೆಯನ್ನೇ ನಂಬಿಕೊಂಡಿರುತ್ತಾರೆ ನೈಸರ್ಗಿಕವಾಗಿ ಅಕಾಲಿಕ ಮಳೆಯಿಂದ ನಷ್ಟ ಉಂಟಾದಾಗ ಸರ್ಕಾರ ಮತ್ತು ತಾಲೂಕು ಆಡಳಿತ ರೈತರಿಗೆ ಸಕಾರಾತ್ಮಕ ಸ್ಪಂದಿಸುವುದು ಅನಿವಾರ್ಯವಾಗಿದೆಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯಾಚರಣೆಯಲ್ಲಿ ತೊಡಗಿದ್ದು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಕಷ್ಟಕ್ಕೆ ಒಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಬೆಳೆಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ರೈತರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದೇನೆಂದು ತಹಶೀಲ್ದಾರ್ ಬಿ. ಎನ್. ಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು, ರೈತರು, ಹಾಜರಿದ್ದರು..
ವರದಿ .ವೆಂಕಟೇಶ್.ಸಿ