1,911 total views
ಸೇಡಂ- ಬೆಂಗಳೂರಿನ ಶಾಸಕರ ಭವನದಲ್ಲಿ ಕಲಬುರ್ಗಿಯ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಮಹಾಂತಪ್ಪ ಕೆ ಸಂಗಾವಿ ನೇತೃತ್ವದಲ್ಲಿ ಶಾಸಕ ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಅವರಿಗೆ ಹೂಗುಚ್ಚ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆಯಲ್ಲಿ ಸೇಡಂನ ಎಸ್ಸಿ ಘಟಕದ ಅಧ್ಯಕ್ಷ ಜೈ ಭೀಮ್ ಊಡಗಿ, ಮಳಖೇಡ ಗ್ರಾಪಂ ನಾ ಮಾಜಿ ಅಧ್ಯಕ್ಷ ರಾಜಶೇಖರ್ ಪುರಾಣಿಕ, ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀನಿವಾಸ್ ಸಂಗಾವಿ, ಸುನಿಲ್ ನಿಂಗಮರಿ,ಮೊಹಮ್ಮದ್ ಅಮಿನೋಧಿನ, ವಿಶ್ವನಾಥ್ ಸಂಗಾವಿ ಮತ್ತು ಉಮರ್ ಲಂಗ್ರಿ ಮಳಖೇಡ ಸೇರಿದಂತೆ ಹಲವರು ಇದ್ದರು. ಮುಂಬರುವ ಸಚಿವ ಸಂಪುಟದಲ್ಲಿ ಶಾಸಕ ಡಾ.ಶರಣಪ್ರಕಾಶ್ ಪಾಟೀಲ್ ಜೀ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಮಾಡುವುದರ ಜೊತೆಗೆ ಮತ್ತೆ ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ಧಿಗೆ ಮತ್ತೆ ರಾಜ್ಯ ನಾಯಕರು ಅವಕಾಶ ಮಾಡಿಕೊಡುತ್ತಾರೆ ಎಂಬ ಭರವಸೆ ಇದೆ.
ಮಹಾಂತಪ್ಪ ಕೆ ಸಂಗಾವಿ
ಅಧ್ಯಕ್ಷರು ಕಾಂಗ್ರೆಸ್ ಎಸ್ಸಿ ಘಟಕ ಕಲಬುರ್ಗಿ
ವರದಿ -ಎಮ್ ಬಿ ಹಡಪದ ಸುಗೂರ ಎನ್