1,914 total views
ಕಲಬುರಗಿ- ಪುರಾಣ ಪ್ರವಚನದಿಂದ ದೇವರ ಕೃಪೆ ಪಾತ್ರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಪಾಳಾದ ಮಳೇಂದ್ರ ಶಿವಾಚಾರ್ಯ ಮಠದ ಡಾ.ಗುರುಮೂರ್ತಿ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀಮಠದ ಲಿಂ.ಶ್ರೀ ಸದ್ಗುರು ಮಳೇಂದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಮತ್ತು ಸುಕ್ಷೇತ್ರ ಅಬ್ಬೆ ತುಮಕೂರು ಸದ್ಗುರು ಶ್ರೀ ವಿಶ್ವರಾಧ್ಯರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲರೂ ಪ್ರತಿ ನಿತ್ಯ ಕನಿಷ್ಠ ಒಂದು ಗಂಟೆ ಕಾಲ ದೇವರ ಸೇವೆ ಮಾಡಬೇಕು. ಪುರಾಣ ಶ್ರವಣ ಸತ್ಸಂಗಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರಿಂದ ಮನಸ್ಸು ಪ್ರಫುಲ್ಲಗೊಂಡು ಚಿಂತೆಗಳು ದೂರವಾಗುತ್ತವೆ. ಆರೋಗ್ಯ ವೃದ್ಧಿಯಾಗಿ ಜೀವನ ಸುಖಮಯವಾಗುತ್ತದೆ’ ಎಂದರು.
‘ಪೂಜೆ, ದಾನ, ಧರ್ಮ, ಒಳ್ಳೆಯ ಕಾರ್ಯ, ಸನ್ನಡತೆಯಿಂದ ಪುಣ್ಯ ಪ್ರಾಪ್ತಿಯಾಗುತ್ತಿರುತ್ತದೆ. ಇದು ಮುಖದಲ್ಲಿ ಚೇತನ ತರುತ್ತದೆ. ಆದರೆ ನೀವು ಇನ್ನೊಬ್ಬರನ್ನು ನಿಂದಿಸಿದರೆ, ಮೋಸ ಮಾಡಿದರೆ, ಕೆಟ್ಟ ಹಾದಿಯಲ್ಲಿ ನಡೆದರೆ ಪುಣ್ಯವೆಲ್ಲ ಕರಗಿ ನರಕಕ್ಕೆ ಹೋಗಬೇಕಾಗುತ್ತದೆ’ಎಂದರು.
ಮೇ 12 ರಿಂದ ಪುರಾಣ ಆರಂಭಗೊಂಡಿದ್ದು, ಮೇ 20 ರಂದು ಮಹಾ ಮಂಗಲಗೊಂಡಿತು.
ಹಾಗೆ ಪ್ರತಿವರ್ಷದಂತೆ ಈ ವರ್ಷವು 2023- 24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸವಿತಾ ತಂದೆ ಸೂರ್ಯಕಾಂತ್ ಗೌಡ 81.76%, ಅಂಬಿಕಾ ತಂದೆ ಪಾಂಡುರಂಗ 80.80%, ಇರ್ಫಾನ್ ತಂದೆ ನಬಿಲಾಲ್ 76.80% ಅವರಿಗೆ ನೆನಪಿನ ಕಾಣಿಕೆ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ಬಿಬಿಎಂಪಿ ಸಂಯುಕ್ತ ಆಯುಕ್ತ ಡಾ.ಬಸವರಾಜು ಮಗಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ಶ್ರದ್ದೆ, ಪರಿಶ್ರಮ, ಸತತ ಪ್ರಯತ್ನ, ನಿರಂತರ ಕಲಿಕೆ ಅಗತ್ಯ ಎಂದು ಸಲಹೆ ನೀಡಿದರು.
ತಪೋವನ ಸಿದ್ದರಾಮ ಶಿವಾಚಾರ್ಯ ಶಾಖಾಪುರದ ಸ್ವಾಮಿ ದಿವ್ಯಾ ಸಾನಿಧ್ಯ ವಹಿಸಿದರು,ಗಂಗಾಧರ್ ಮಹಾಸ್ವಾಮಿಗಳು ನೇತೃತ್ವ ವಹಿಸಿದರು, ಚಿತ್ತಾಪುರ ಕಂಬಳೆಶ್ವರ ಮಠದ ಸೋಮಶೇಖರ್ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದರು.ಇತರರು ಘನ ಉಪಸ್ಥಿತ ಸ್ಥಾನ ಮತ್ತು ಉಪಸ್ಥಿತಿ ಸ್ಥಾನ ವಹಿಸಿದರು.
ಗಿರಿಮಲ್ಲಪ್ಪ ಹಕ್ಕಿ ಪಾಳಾ ತಾಲೂಕು ಅಭಿವೃದ್ಧಿ ಅಧಿಕಾರಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ರಾಯಚೂರು, ಗ್ರಾಮಸ್ಥರು ಮತ್ತು ಇತರರು ಇದ್ದರು.
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.