2,974 total views
ರಿಗೆ
ಗೌರವಾನ್ವಿತ ರಾಜ್ಯಪಾಲರವರಿಗೆ
ಕರ್ನಾಟಕ ರಾಜ್ಯ,
ಬೆಂಗಳೂರು
ವಿಷಯ: ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ವ್ಯಕ್ತಿಗೆ ಪ್ರಮಾಣ ವಚನ ನೀಡಬಾರದಾಗಿ ಮನವಿ
ಮಾನ್ಯರೆ,
ಬೆಂಗಳೂರು ನಗರದ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಶ್ರೀ ಜಮೀರ್ ಅಹ್ಮದ್ ಖಾನ್ ಅವರು ನಾಳೆಯ ದಿನ ನೂತನವಾಗಿ ರಚನೆಯಾಗ್ತಿರೋ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆಂಬ ಮಾಹಿತಿ ಬರುತ್ತಿದೆ. ದಯವಿಟ್ಟು ಈ ವ್ಯಕ್ತಿಗೆ ಪ್ರಮಾಣ ವಚನ ಭೋದಿಸಬಾರದೆಂದು (ಮಂತ್ರಿಯಾಗಲು ಅವಕಾಶ ಕಲ್ಪಿಸಬಾರದು) ಎಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇವೆ.
ಶಾಸಕರಾಗಿ ಆಯ್ಜೆಯಾಗಿರುವ ಜಮೀರಹ್ಮದ್ ಅವರು ಚುನಾವಣಾ ಆಯೋಗಕ್ಕೆ ದೋಷಪುರಿತ ನಾಮಪತ್ರ ಸಲ್ಲಿಸಿದ್ದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುತ್ತಾರೆ. ಈ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದರೂ ಆಯೋಗವು ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಅಕ್ಷಮ್ಯ. ಹಾಗಾಗಿ ಈ ವಿಚಾರವಾಗಿ ನಾವು ತಪ್ಪು ಮಾಹಿತಿ ನೀಡಿರುವ ಜಮೀರ್ ಅಹ್ಮದ್ ಹಾಗೂ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಚುನಾವಣಾ ಅಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ದೂರು (ಪ್ರಕರಣ) ದಾಖಲಿಸುವವರಿದ್ದೇವೆ. ಈ ಸಂದರ್ಭದಲ್ಲಿ ನೂತನ ಸರ್ಕಾರದ ಭಾಗವಾಗಿ ಜಮೀರ್ ಅಹಮ್ಮದ್ ಸಚಿವರಾದಲ್ಲಿ ಅದರಿಂದ ನಮಗೆ ನ್ಯಾಯ ಪಡೆಯಲು ಸಮಯ ಹಿಡಿಯಬಹುದು. ಹಾಗೂ ಅವರು ಸಚಿವರಾದ ಕಾರಣ ಅನೇಕ ರೀತಿಯ ಪ್ರಭಾವವು ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ , ನಮ್ಮ ಕಾನೂನು ಹೋರಾಟ ಮುಗಿಯೋ ವರೆಗೂ ಮಾನ್ಯ ಜಮೀರ್ ಅಹ್ಮದ್ ಅವರನ್ನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಡಬಾರದು ಅನ್ನುವುದು ನಮ್ಮ ಕಳಕಳಿಯ ವಿನಂತಿ
ವಂದನೆಗಳು
ತಮ್ಮ ವಿಶ್ವಾಸಿ
ರುಕ್ಮಾಂಗದ ಎಸ್
ಸಂಚಾಲಕರು, ನವಭಾರತ ಸೇನಾ