2,004 total views
ಶಿಡ್ಲಘಟ್ಟ: ನಗರದಲ್ಲಿ ಜೆಡಿಎಸ್ ಪಕ್ಷದ ಶಾಸಕ ಬಿ. ಎನ್ ರವಿಕು ಮಾರ್ ರವರ ನೇತೃತ್ವದಲ್ಲಿ 91ನೇ ವರ್ಷದ ಅವರ ಹುಟ್ಟು ಹಬ್ಬದ ಅಂಗವಾಗಿ ನಗರಸಭೆಯ ಎಲ್ಲಾ ಸದಸ್ಯರು, ಮುಖಂಡರು ಸಾರ್ವಜನಿಕ ಆಸ್ಪತ್ರೆಯ ಮುಂದೆ ಕೇಕ್ ಕತ್ತರಿಸಿ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ದೇವೇಗೌಡರ ಹುಟ್ಟು ಹಬ್ಬವನ್ನು ಆಚರಿಸಿದರು. ಈ ಸಂಧರ್ಭದಲ್ಲಿ ನಗರಸಭೆ ಸದಸ್ಯ ರಘು ಮಾತನಾಡಿ, ಮಾಜಿ ಪ್ರಧಾನಿಗಳು, ದೇಶದ ಅಪರೂಪದ ರಾಜಕಾರಿಣಿ ಮತ್ತು ಧೀಮಂತ ನಾಯಕ ಎಚ್.ಡಿ ದೇವೇಗೌಡ ನವರ 91ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿ ದೇವೇಗೌಡರಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಉಪಾಧ್ಯಕ್ಷ ಚಿಕ್ಕಮನಿಯಪ್ಪ,ಮಾಜಿ ಪುರಸಭಾ ಅಧ್ಯಕ್ಷ ಜಗನ್ನಾಥ್,ಮಾಜಿ ಪುರಸಭೆ ಸದಸ್ಯ ಚಿನ್ನಿ ಶ್ರೀನಿವಾಸ್, ಕೃಷ್ಣಪ್ಪ, ರಾಮಚಂದ್ರಪ್ಪ, ನಗರಸಭೆ ಸದಸ್ಯರಾದ ರಾಘವೇಂದ್ರ, ವೆಂಕಟಸ್ವಾಮಿ,ಸುರೇಶ್, ಮುಖಂಡರಾದ ಎಸ್ ಎಂ ರಮೇಶ್,ನಂದ ಕಿಶನ್, ಬಾಲಕೃಷ್ಣ, ನವೀನ್ ಕುಮಾರ್ , ನಿಜಾಮುದ್ದೀನ್, ಆಸೀಫ್ ವುಲ್ಲಾ, ಅನ್ಸರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ.ವೆಂಕಟೇಶ್. ಸಿ