1,919 total views
ಮುದ್ದೇಬಿಹಾಳ: ನೂತನ ಶಾಸಕರಾದ ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸಂಪುಟ ರಚನೆ ವೇಳೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಿ ಅವರ ರಾಜಕೀಯ ಹಿರಿತನವನ್ನು ಗೌರವಿಸಬೇಕು ಎಂದು ಬಿಜ್ಜೂರ ಗ್ರಾಮದ ನಾಡಗೌಡರ ಅಭಿಮಾನಿಯಾದ ಶಿವಾಜಿ ತಳವಾರ ಎಐಸಿಸಿ ಹೈಕಮಾಂಡ್ ಅನ್ನು ಆಗ್ರಹಿಸಿದ್ದಾರೆ. ಪ್ರಕಟಣೆ ನೀಡಿದ್ದು, 35-40 ವರ್ಷಗಳ ಕಾಲ ನಿರಂತರವಾಗಿ ಪಕ್ಷನಿಷ್ಠರಾಗಿದ್ದು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಿಂದೆ ಸರ್ಕಾರಗಳಲ್ಲಿ ರಾಜ್ಯ ಸಚಿವ ಸ್ಥಾನ ಸೇರಿ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಈ ಭಾಗ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದುವುದು ಸಾಧ್ಯವಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ವರಿಷ್ಠರ ಮನವೊಲಿಸಬೇಕು ಎಂದು ಸಮಾಜ ಸೇವಕರಾದ ಶಿವಾಜಿ ತಳವಾರ ಕೋರಿದ್ದಾರೆ