4,312 total views
ಕಾಂಗ್ರೆಸಿನ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್ ಕ್ಷೇತ್ರವಾದ ಬಬಲೇಶ್ವರವು ನೇರ ನೇರ ಕ್ಷೇತ್ರವಾಗಿತ್ತು .ಬಿಜೆಪಿಯ ವಿಜುಗೌಡ ಅವಕಾಶಕ್ಕಾಗಿ ಕಣ್ಣೀರು ಸುರಿಸುತ್ತಾ ಮತಕೇಳುತ್ತಾ ಕ್ಷೇತÀ್ರದ ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಸೋತಿದ್ದಾರೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ತಂದು ಕ್ಷೇತ್ರದುದ್ದಕ್ಕೂ ಶುದ್ದ ಕುಡಿಯುವ ನೀರು, ಕೃಷಿಗಾಗಿ ನೀರಾವರಿ ಸೇರಿದಂತೆ ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ಮಾಡುತ್ತಾ ಆಧುನಿಕ ಭಗೀರಥ ಎಂದೇ ಖ್ಯಾತಿಯಾದ ಎಂ.ಬಿ.ಪಾಟೀಲ್ ರವರು ಮತ್ತೊಮ್ಮೆ ಗೆದ್ದಿದ್ದಾರೆ. ಕಾಂಗ್ರೇಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿ, ಸದ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಒಬ್ಬರಾಗಿ ಗೆದ್ದಿರುವುದು ಮುಂದಿನ ಸರ್ಕಾರದಲ್ಲಿ ಮಹತ್ವದ ಹುದ್ದೆಯೊಂದಿಗೆ ಮಹತ್ವದ ಪಾತ್ರವೊಂದನ್ನು ವಹಿಸುತ್ತಾರೆ.