1,395 total views
ಮುದ್ದೇಬಿಹಾಳ:ಆಜಾದ್ ನಗರದ ವಿದ್ಯಾರ್ಥಿ ಮೊಹ್ಮದ್ ರಫಿಕ್.ಕಾಲೆಸಾಬ.ಮುಲ್ಲಾ ಪ್ರಾರ್ಥನಾ ವಿದ್ಯಾಮಂದಿರ ವಿದ್ಯಾರ್ಥಿಯಾಗಿದ್ದು SSLC ಯಲ್ಲಿ 625ರಲ್ಲಿ 519 ಅಂಕ ಪಡೆದು ಶೇ83.04 ರಿಂದ ಪ್ರಥಮ ಸ್ಥಾನ ತನ್ನದಾಗಿಸಿಕೊಂಡು ಶಾಲೆ ಹಾಗು ಮುದ್ದೇಬಿಹಾಳ ತಾಲ್ಲೂಕಿನ ಹೇಸರು ತಂದಿದ್ದು ಮುದ್ದೇಬಿಹಾಳದ ಜನತೆಗೆ ಬಹಳ ಸಂತಸ ತಂದಿದೆ ಫಲಿತಾಂಶವನ್ನ ಗಮನಿಸಿದ ಸೊರಜ ಸೋಷಿಯಲ್ ಗ್ರೊಪ ಅಧ್ಯಕ್ಷರು ಹಾಗು ಪದಾಧಿಕಾರಿಗಳಿಂದ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಮಹೇಬೂಬ ಹಡಲಗೇರಿ ರವರು ವಿಧ್ಯಾರ್ಥಿಗಳು ತಮ್ಮ ತಂದೆ ತಾಯಿ ಪಡುವಂತಹ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕವಾಗಿ ಕ್ರಾಂತಿ ಮಾಡಬೇಕು ಇಂದು ಮೊಹ್ಮದ ರಫಿಕ್ ರವರು ಸಾಧನೆ ಮಾಡಿದ್ದು ವಿದ್ಯಾರ್ಥಿಗಳಿಗೆ ಸ್ಪೊರ್ಥಿ ತುಂಬುವಂತಾಗಿದೆ ಎಂದರು. ಈ ವೇಳೆ ರೇವಣಸಿದ್ದಪ್ಪ ನಾಯಕ ಯುಸುಫ ಸಾತಿಹಾಳ ಕಾಲೆಸಾಬ ಮುಲ್ಲಾ ಸಜ್ಜಾದ ಖಾಜಿ ಹಾಶಿಮ್ ಸಾತಿಹಾಳ ಅಬ್ಬಾಸ್ ಹುಲಿಕುಂಟಿ ಗುರುರಾಜ ಲಂಬಾಣಿ ಇಸ್ಲಾಂ ಕುಳಗೇರಿ ಹಣಮಂತ ಬೇಳಗಲ ಅಧ್ಯಕ್ಷರು ತಾಲೂಕಾ ಪತ್ರಕರ್ತರ ಸಂಘ ಹಾಗು ಮತ್ತಿತ್ತರರು ಉಪಸ್ಥಿತರಿದ್ದರು.