1,027 total views
ಬೇಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ದಿನೇಶ್ ಗೌರಿರಾಮ್ ರವರು ಕ್ಷೇತ್ರದಲ್ಲಿ ಕ್ರಮ ಸಂಖ್ಯೆ 08, ತೆಂಗಿನ ತೋಟದ ಗುರುತಿಗೆ ಸ್ಪರ್ಧಿಸಿದ್ದು , ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ದುಮ್ಮೆನಹಳ್ಳಿ ಗ್ರಾಮದ ರೈತ ಮಹಿಳೆಯರಿಗೆ ಮತ ನೀಡುವಂತೆ ಮನವಿ ಮಾಡಿದಾಗ ಟೊಮೆಟೊ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರು ಇಂದಿನ ರಾಜಕೀಯ ಪಕ್ಷಗಳು ಕೇವಲ ಪುರುಷರನ್ನು ಪರಿಗಣಿಸಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಊರಿನ ಯುವಕರನ್ನು ಕುಡಿಸಿ ಹಾಳುಮಾಡಿ ಪ್ರತಿಯೊಂದು ಹಳ್ಳಿಯ ಯುವ ಸಮುದಾಯವನ್ನು ಕುಡುಕ ಸಮುದಾಯವನ್ನು ಮಾಡಿ ತಮ್ಮ ತಮ್ಮ ಗಂಡಂದಿರು ಮತ್ತು ಮಕ್ಕಳು ಕುಡಿದು ಮನೆಯಲ್ಲಿ ಮಲಗಿದ್ದಾರೆ ನಾವು ಕೂಲಿಗೆ ಬಂದಿದ್ದೇವೆ ಎಂದು ತಮ್ಮ ನೋವನ್ನು ಹೇಳಿಕೊಂಡರು. ನಿಮ್ಮಂಥ ವಿದ್ಯಾವಂತರು ಚುನಾವಣೆಯಲ್ಲಿ ಗೆದ್ದು ಆರಿಸಿ ಬಂದರೆ ಒಂದು ಸುಶಿಕ್ಷಿತ ಮತ್ತು ಉತ್ತಮ ಸಮಾಜವನ್ನು ಕಟ್ಟಬಹುದು.ನಮ್ಮ ಮಕ್ಕಳು ನೆಮ್ಮದಿಯಿಂದ ಉತ್ತಮ ವಿದ್ಯಾಭ್ಯಾಸ ಪಡೆದು ಸುಂದರ ಬದುಕು ನಡೆಸಲು ನಿಮ್ಮಂಥ ಸಮರ್ಥ ವಿದ್ಯಾವಂತ ಪ್ರಾಮಾಣಿಕ ನಾಯಕರು ಮತ್ತು ಶಾಸಕರು ಬೇಲೂರಿಗೆ ಬೇಕು ಎಂದು ದಿನೇಶ್ ಗೌರಿರಾಮ್ ರವರನ್ನು ಹರಸಿ ತೆಂಗಿನ ತೋಟದ ಗುರುತಿಗೆ ಮತ ನೀಡುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾದ ದಿನೇಶ್ ಗೌರಿರಾಮ್ ರವರ ಜೊತೆ ರತೀಶ್ ರವರು ಕೂಡ ಹಾಜರಿದ್ದರು.