1,290 total views
ಕಾಳಗಿ : ಪಟ್ಟಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ದಲಿತ ಸಮಾಜದ ಮುಖಂಡ ಬಸವರಾಜ ಬೆಣ್ಣೂರಕರ್ ಮಾತನಾಡಿ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ ಅವರಿಗೆ ದಲಿತ ಸಮಾಜ ಒಗ್ಗಟ್ಟಾಗಿ ಬೆಂಬಲ ನೀಡುವುದಾಗಿ ಘೋಷಿಸಿದರು. ಚಿಂಚೋಳಿ ಮತಕ್ಷೇತ್ರದಲ್ಲಿ ದಲಿತ ಸಮೂದಾಯ ಹೆಚ್ಚಿನ ಜನಸಂಖ್ಯೆಯಲ್ಲಿದ್ದು ಅವಿನಾಶ್ ಜಾಧವ ಅವರ ಗೆಲುವು ಖಚಿತ ಎಂದರು. ಕಳೆದ 60 ವರ್ಷಗಳ ಕಾಲ ರಾಜಕೀಯ ಚುಕ್ಕಾಣಿ ಹಿಡಿದ ಕಾಂಗ್ರೆಸ್ ದಲಿತ ಸಮಾಜದ ಪ್ರಗತಿಗೆ ಕಿಂಚಿತ್ತೂ ಕಾಳಜಿ ವಹಿಸದೆ ಕೇವಲ ಮತ ಬ್ಯಾಂಕಗಾಗಿ ಸಮಾಜದವರನ್ನು ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ದೇಶದ ಹೆಮ್ಮೆಯ ನಾಯಕ, ಸಬಕಾ ಸಾತ್ ಸಬಕಾ ವಿಕಾಸ್ ಎಂಬ ಚಿಂತನೆಯನ್ನಿಟ್ಟುಕೊಂಡಿರುವ ಪ್ರಧಾನಿ ಮೋದಿಯವರ ನಾಯಕತ್ವ ಹಾಗೂ ಬಿಜೆಪಿ ತತ್ವ ಸಿದ್ದಂತಾವನ್ನು ಮನಗಂಡು ಚಿಂಚೋಳಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದರು.
ಚಿಂಚೋಳಿ ಬಿಜೆಪಿ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಮಹೇಂದ್ರ ಪೂಜಾರಿ, ಶರಣಬಸಪ್ಪ ಹೇರೂರ, ಕಾಶಿನಾಥ ಶೆಳ್ಳಗಿ, ಶಿವರಾಯಗೌಡ ಹುಳಗೆರಾ, ರಮೆಶ ಜನಗೊಂಡ, ಗುರುನಾಥ ಹೂಸಮನಿ, ಚಂದ್ರಕಾಂತ ಬುಮಾಣ, ಶೇಖರ ಮಾನಶೆಟ್ಟಿ, ಕಾಳಶೆಟ್ಟಿ ಪಡಶೇಟ್ಟಿ, ವೀರಭದ್ರಪ್ಪ ಸಲಗಾರ, ರಾಜೆಂದ್ರಬಾಬು ಹೀರಾಪೂರಕರ್, ಚೆನ್ನಮಲ್ಲಪ್ಪ ಟೆಂಗಳಿ, ಕಾಶಿನಾಥ ರಾಜಾಪೂರ, ಗಣೇಶ ಸಿಂಗಶೆಟ್ಟಿ ಇತರರು ಇದ್ದರು.