1,329 total views
ಜಾತಿನಿಂದನೆ ಹಿನ್ನಲೆ.ಜಿಟಿಡಿ ಪುತ್ರ ಹರೀಶ್ ಗೌಡ ಬೆಂಬಲಿಗರಿಂದ ಹಲ್ಲೆ.ಯುವಕ ಆಸ್ಪತ್ರೆಗೆ ದಾಖಲು.ಹುಣಸೂರಿನಲ್ಲಿ ರೌಡಿಗಳ ಆಟಾಟೋಪ ಆರೋಪ…
ಹುಣಸೂರು ಚುನಾವಣೆಯಲ್ಲಿ ರೌಡಿಗಳ ಅಟ್ಟಹಾಸ ತಾಂಡವವಾಡುತ್ತಿದೆ.ಕಳೆದ ರಾತ್ರಿ ಜಿಟಿಡಿ ಬೆಂಬಲಿಗರೆಂದು ಹೇಳಲಾದ ರೌಡಿಯೊಬ್ಬ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ಈ ಸಂಭಂಧ ಇಬ್ಬರ ಮೇಲೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೆಡಿಎಸ್ ಅಭ್ಯರ್ಥಿ ಹರೀಶ್ ಗೌಡ ಬೆಂಬಲಿಗರೆಂದು ಹೇಳಲಾದ
ಸೈಯದ್ ಮಸೂದ್.ಆ.ಕುಟ್ಟಿ ಹಾಗೂ
ಲೋಹಿತ್ ಗೌಡ
ಎಂಬುವರ ಮೇಲೆ FIR ದಾಖಲಾಗಿದೆ.ಹುಣಸೂರು ನಿವಾಸಿ ಮಣಿ ಎಂಬಾತನ ಮೇಲೆ ಹಲ್ಲೆ ನಡೆದಿದೆ.ಜಾತಿನಿಂದನೆ ಮಾಡಿ ಸೈಯದ್ ಮಸೂದ್ ಹಾಗೂ ಲೋಹಿತ್ ಗೌಡ ಹಲ್ಲೆ ನಡೆಸಿದ್ದಾರೆ.ಬೈ ಪಾಸ್ ರಸ್ತೆಯಲ್ಲಿರುವ ಟೀ ಅಂಗಡಿಯಲ್ಲಿ ಮಣಿ ಟೀ ಕುಡಿಯಲು ಹೋದ ವೇಳೆ ಹರೀಶ್ ಗೌಡ ಬೆಂಬಲಿಗರು ಕಿರಿಕ್ ತೆಗೆದಿದ್ದಾರೆ.ಜಾತಿ ನೆಪ ಒಡ್ಡಿ ಕಿರಿಕ್ ಮಾಡಿ ಹಲ್ಲೆ ನಡೆಸಿರುವುದಾಗಿ ಗಾಯಾಳು ಮಣಿ ಆರೋಪಿಸಿದ್ದಾರೆ.ಮೇ 13 ರ ನಂತರ ಮನೆಗೆ ನುಗ್ಗಿ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಮಣಿ ಆರೋಪಿಸಿದ್ದಾರೆ.ಹರೀಶ್ ಗೌಡ ರೌಡಿಗಳ ಸಹಕಾರದಿಂದ ಹುಣಸೂರಿನಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆಂದು ಮಣಿ ಆರೋಪಿಸಿದ್ದಾರೆ…