432 total views
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹತ್ತಿರ ಇರುವ ತುರನೂರ ಗ್ರಾಮದ ಹತ್ತಿರ ಅರೆಬೆಂಚಿಯ ರಸ್ತೆ ಜ್ಞಾನ ಪ್ರಮೋದಿನಿ ಶಾಲೆಯ ಹತ್ತಿರ, ಖಚಿತ ಮಾಹಿತಿಯ ಮೇರೆಗೆ ಬಿಳಿಯ ಬಣ್ಣದ ಇನ್ನೋವಾ ಕಾರ್ KA O5 4775 ರಲ್ಲಿ 19 ನೆ ತಾರೀಕಿನ ದಿನ ಸಂಜೆ 4-30 ಗಂಟೆ ಸಮಯದಲ್ಲಿ ದಾಖಲೆಗಳು ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 1.53 ಕೋಟಿ 485 ಸಾವಿರ ಹಣವನ್ನು,ಪ್ಲಾಯಿಂಗ್ ಸ್ಕ್ವಾಡ್ ತಂಡ ಪೊಲೀಸರು ಹಾಗೂ ರಾಮದುರ್ ತಾಲೂಕಿನ ಸಂಬಂಧ ಪಟ್ಟ ಚುನಾವಣೆ ಅಧಿಕಾರಿಗಳು ಕಾರ್ಯಾಚರಣೆ ಮಾಡಿ, ಅಕ್ರಮವಾಗಿ ಸಾಗುಸುತ್ತಿದ್ದ ಹಣವನ್ನು ವಶಪಡಿಸಿ ಕೊಂಡು ಪರಿಶೀಲಿನೆ ಮಾಡಿ,ಆದಾಯ ತೆರಿಗೆಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಿ ತಣಕೆಯನ್ನು ಮುಂದು ವರೆಸಿರುತ್ತಾರೆ,ಆರೋಪಿ ಚಂದ್ರಶೇಖರಯ್ಯ ಎಂದು ತಿಳಿದುಬಂದಿದೆ ಇವನೂ ಬೆಂಗಳೂರು ಜಿಲ್ಲೆಯ ನಾಗರಭಾವಿ ಯವನು, ಇವನ ಜೊತೆ ಕಾರ್ ಡ್ರೈವರ್ ಬಸವರಾಜ್ ಎಂಬ ಬೆನಕಹಳ್ಳಿ ಗ್ರಾಮದವನು,ಎಂದು ತಿಳಿದು ಬಂದಿರುತ್ತದೆ, ಅಕ್ರಮವಾಗಿ ಬಂದಿದ್ದ ಹಣದ ಬ್ಯಾಗ ಪರಿಶೀಲನಾ ಸಮಯದಲ್ಲಿ ದಂಡಾಧಿಕಾರಿಗಳಾದ ಬಸವರಾಜ್, ಮತ್ತು ಬೆಳವಟಗಿ, ಹಾಗೂ ಪೊಲೀಸ್ ಅಧಿಕಾರಿಗ ಳಾದ ಡಿ ವೈ ಎಸ್ ಪಿ ರಾಮನಗೌಡ ಹಟ್ಟಿ, ಸಿಪಿಐ ಪಟ್ಟಣಶೆಟ್ಟಿ, ಮತ್ತು ಪಿಎಸ್ಐ ಶಿವಾನಂದ್ ಕಾರಜೋಳ, ಮತ್ತು ಚುನಾವಣಾ ಅಧಿಕಾರಿಗಳು ಬಾಗಿ ಇದ್ದರೂ,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ