526 total views
ಹುಣಸೂರು ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸುತ್ತಿದೆ.ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ.ತಾನೇನೂ ಹಿಂದಿಲ್ಲ ಎಂಬಂತೆ ಬಿಜೆಪಿ ಸಹ ಗೆಲುವು ಸಾಧಿಸಬೇಕೆಂಬ ಹುಮ್ಮಸ್ಸಿನಲ್ಲಿ ತನ್ನ ಪ್ರಯತ್ನ ನಡೆಸುತ್ತಿದೆ.ಈ ಮಧ್ಯೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳೂ ಸಹ ಕೇಳಿಬರುತ್ತಿದೆ.
ಈ ಹಿನ್ನಲೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗುತ್ತಿದೆ.ಚುನಾವಣಾಧಿಕಾರಿಗಳು ರಾತ್ರಿ ಕಾರ್ಯಾಚರಣೆಯನ್ನ ಸದ್ದಿಲ್ಲದೆ ಕೈಗೊಳ್ಳುತ್ತಿದ್ದಾರೆ.ಮಾಹಿತಿ ಬಂದ ಕಡೆ ಧಿಢೀರ್ ದಾಳಿ ನಡೆಸುತ್ತಿದ್ದಾರೆ.ನಿನ್ನೆ ತಡರಾತ್ರಿ ಹೊಸರಾಮನಹಳ್ಳಿ ಬಳಿ ಹಣ ಹಂಚಲಾಗುತ್ತಿದೆ ಎಂಬ ಮಾಹಿತಿ ಬಂದೊಡನೆ ಚುನಾವಣಾಧಿಕಾರಿ ಮನು,ತಹಸೀಲ್ದಾರ್ ಅಶೋಕ್ ನೇತೃತ್ವದ ತಂಡ ಮಧ್ಯರಾತ್ರಿಯಲ್ಲಿ ಹಾಜರಾಗಿದ್ದಾರೆ.ಆದರೆ ಬಂದದಾರಿಗೆ ಸುಂಕವಿಲ್ಲವೆಂಬಂತೆ ಬರಿಗೈಲಿ ಹಿಂದಿರುಗಿದ್ದಾರೆ.ಆದರೂ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.ಮನುಗನಹಳ್ಳಿ ಸೇರಿದಂತೆ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ತಪಾಸಣೆ ಬಿಗಿಗೊಳಿಸಿದ್ದಾರೆ…