468 total views
ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲಾ ಜಿ ದಾದಾಪುರ ಗ್ರಾಮದಲ್ಲಿ ಎರಡನೇ ಬಾರಿಗೆ ಡಿಪಿಎಲ್ 2ನೇ ಆವೃತ್ತಿ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಕ್ರಿಕೆಟ್ ಪಂದ್ಯವಳಿಯಾಗಿದೆ. ಏಪ್ರಿಲ್ 2ನೇ ತಾರೀಕು ಮತ್ತು ಮೂರನೇ ತಾರೀಕು ನಾಲ್ಕು ತಂಡಗಳು ದಾದಾಪುರ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿ ಇಡೀ ರಾಜ್ಯದ ಸದ್ದು ಮಾಡಿದೆ. ಈ ಚಿಕ್ಕ ಗ್ರಾಮದಲ್ಲಿ ರಾಜ್ಯಮಟ್ಟಕ್ಕೆ ನೇರ ಪ್ರಸಾರದಿಂದ ತಲುಪುವಂತೆ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ, ಇಲ್ಲಿರುವ ಕ್ರೀಡಾಪಟುಗಳು ಸತತ ಎರಡು ತಿಂಗಳಿಂದ ಕಷ್ಟಪಟ್ಟು ಈ ಕ್ರೀಡೆಯನ್ನು ಹಮ್ಮಿಕೊಂಡು ಕ್ರೀಡೆಯನ್ನ ಯಶಸ್ವಿಗೊಳಿಸಿದ್ದಾರೆ. ಈ ಪಂದ್ಯದ ವಿಶೇಷತೆ ಏನೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ನಿಯಮಗಳಿವೆ ಕ್ರೀಡಾಂಗಣವನ್ನ ಅದೇ ರೀತಿಯಾಗಿ ತಯಾರಿ ಮಾಡಿರುತ್ತಾರೆ ಹಾಗೂ ಗ್ರಾಮದ ಕ್ರೀಡಾಪಟುಗಳು ಎರಡು ತಿಂಗಳಿಂದ ನಿಯಮಗಳನ್ನ ಪಾಲಿಸುತ್ತಾ ಕ್ರೀಡಾಂಗಣವನ್ನ ರಚನೆ ಮಾಡಿದ್ದಾರೆ. ನಾಲ್ಕು ತಂಡಗಳು 9 ಪಂದ್ಯಗಳು ಒನ್ ಗೇಮ್ ಒನ್ ಡ್ರೀಮ್ ಪ್ಲೇ ಫಾರ್ ಯುನಿಟಿ ಇಂದು ಚಾಂಪಿಯನ್ ಆಗಿರುವ ತಂಡ ದಾದಾಪೂರ ಈಗಲ್ , ರನ್ನರ್ ಆಫ್ ಯೋದಸ್ ಆಗಿ ಹೊರಹೊಮ್ಮಿದ್ದಾವೇ, ಇನ್ನ್ನು ಉಳಿದ ಎರಡು ತಂಡಗಳು 1)ಆರ್ ಸಿ ಡಿ, & 2)ಬುಲೆಟ್ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದೇವೆ, ಈ ನಾಲ್ಕು ತಂಡಕ್ಕೆ ಯಾವುದೇ ರೀತಿ ಭೇದಭಾವವಿಲ್ಲದೆ ಸಮಾನವಾಗಿ ಹಂಚಿಕೊಂಡು ಬಹುಮಾನವನ್ನು ಪಡೆದುಕೊಂಡಿದ್ದಾರೆ,
ವರದಿ ಭರ್ಮಪ್ಪ ಮಾಗಳದ