426 total views
ಮೈಸೂರು :-ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಸದ್ಯ ಮೈಸೂರಿನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಸುತ್ತೂರಿನ ತೋಟವೊಂದರಲ್ಲಿ ಶೂಟಿಂಗ್ ನಡೀತಿದೆ. ನೆಚ್ಚಿನ ನಟನನ್ನು ನೋಡಲು ಸಾಕಷ್ಟು ಜನ ಅಭಿಮಾನಿಗಳು ಜಮಾಯಿಸಿದ್ದಾರೆ.ಅದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ‘ಕಾಟೇರ’ ತರುಣ್ ಸುಧೀರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ. 70ರ ದಶಕದ ನೈಜ ಘಟನೆಗಳನ್ನು ಆಧರಿಸಿ ಕಥೆ ಚಿತ್ರಕಥೆ ಬರೆಯಲಾಗಿದೆ. ಇದು ದರ್ಶನ್ ನಟನೆಯ 56ನೇ ಸಿನಿಮಾ. ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಧೀರ ರಾಕ್‌ಲೈನ್ ವೆಂಕಟೇಶ್ ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆದಿದೆ.ಪೋಸ್ಟರ್‌ನಲ್ಲಿ ಕೆಂಪು ಬಣ್ಣದ ಅಂಗಿ ಹಾಗೂ ಕಂದು ಬಣ್ಣದ ಲುಂಗಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಕೊಟ್ಟಿದ್ದರು. ಅದೇ ಕಾಸ್ಟ್ಯೂಮ್‌ನಲ್ಲಿ ಈಗ ಮೈಸೂರಿನ ಚಿತ್ರೀಕರಣದಲ್ಲಿ ಭಾಗಿ ಆಗಿರುವುದನ್ನು ನೋಡಬಹುದು. ಶೂಟಿಂಗ್ ಸೆಟ್‌ನಲ್ಲಿ ದರ್ಶನ್ ಕಾರಿನಿಂದ ಇಳಿದು ಕ್ಯಾರವಾನ್ ಏರುವ ವಿಡಿಯೋ ಸಖತ್ ವೈರಲ್ ಆಗ್ತಿದೆ. ಮತ್ತೊಂದು ವಿಡಿಯೋದಲ್ಲಿ ದರ್ಶನ್ ತೋಟದ ಮಧ್ಯೆ ಶೂಟಿಂಗ್ ಮುಗಿಸಿ ಕ್ಯಾರವಾನ್‌ನತ್ತ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳ ಜೈಕಾರ ಕಂಡು ಅವರತ್ತ ಕೈ ಬೀಸಿದ್ದಾರೆ.’ಕ್ರಾಂತಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಅಂದುಕೊಂಡ ಮಟ್ಟದಲ್ಲಿ ಸಿನಿಮಾ ಸಕ್ಸಸ್ ಆಗಲಿಲ್ಲ. ಹಾಗಾಗಿ ‘ಕಾಟೇರ’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಗೆಚ್ಚಿನ ನಿರೀಕ್ಷೆ ಇದೆ. ‘ಕುರುಕ್ಷೇತ್ರ’, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಬಿಟ್ಟರೆ ದರ್ಶನ್ ಬಹುತೇಕ ಕಮರ್ಷಿಯಲ್ ಸಿನಿಮಾಗಳಲ್ಲೇ ನಟಿಸಿದ್ದಾರೆ. ಈ ಬಾರಿ ರೆಟ್ರೋ ಸ್ಟೈಲ್ ಸಿನಿಮಾ ಟ್ರೈ ಮಾಡ್ತಿದ್ದಾರೆ. ಚಿತ್ರದಲ್ಲಿ 50 ವರ್ಷಗಳ ಹಿಂದಿನ ಕಥೆ ಹೇಳಲಾಗ್ತಿದೆ. ಅದಕ್ಕೆ ತಕ್ಕಂತೆ ದರ್ಶನ್ ಲುಕ್, ಕಾಸ್ಟ್ಯೂಮ್ ಎಲ್ಲವೂ ಈ ಚಿತ್ರದಲ್ಲಿದೆ. ತರುಣ್ ನಿರ್ದೇಶನದ ‘ರಾಬರ್ಟ್’ ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡ ‘ಕಾಟೇರ’ ಚಿತ್ರಕ್ಕೆ ಕೆಲಸ ಮಾಡ್ತಿದೆ. ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.. ಹರಿಕೃಷ್ಣ ಸಂಗೀತ ನಿರ್ದೇಶಕಾಗಿ ಆಯ್ಕೆ ಆಗಿದ್ದಾರೆ. ಆರ್ಟ್ ಡೈರೆಕ್ಟರ್ ಗುಣ ಅಂಡ್ ಟೀಂ ಚಿತ್ರಕ್ಕಾಗಿ ಸೆಟ್‌ಗಳನ್ನು ನಿರ್ಮಾಣ ಮಾಡ್ತಿದೆ. ಇತ್ತೀಚೆಗೆ ಚಿತ್ರಕ್ಕಾಗಿ ಹಾಕಿದ್ದ ಹಳ್ಳಿ ಸೆಟ್‌ವೊಂದರ ಫೋಟೊಗಳು ವೈರಲ್ ಆಗಿತ್ತು. 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸುತ್ತಿದೆ. ‘ಕಾಟೇರ’ ಚಿತ್ರದಲ್ಲಿ ಅಸಹಾಯಕ ಜನರ ಬೆಂಬಲಕ್ಕೆ ನಿಲ್ಲುವ ನಾಯಕನಾಗಿ ದರ್ಶನ್ ನಟಿಸುತ್ತಿದ್ದಾರೆ. ಇನ್ನು ಕಥೆಗೆ ತಕ್ಕಂತ ಸೆಟ್‌ಗಳನ್ನು ಹಾಕುವುದು ಮಾತ್ರವಲ್ಲ, ಅಂತದ್ಧೇ ಲೊಕೇಶನ್‌ಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗುತ್ತಿದೆ. ದರ್ಶನ್ ಹಾಗೂ ರಾಧನಾ ರಾಮ್ ಬಿಟ್ಟರೆ ತೆಲುಗಿನ ಜಗಪತಿ ಬಾಬು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸೋದು ಕನ್ಫರ್ಮ್ ಆಗಿದೆ. ಈಗಾಗಲೇ ಶೇಕಡಾ 40% ಚಿತ್ರೀಕರಣ ಮುಗಿಸಲಾಗಿದೆ. ವರಲಕ್ಷ್ಮಿ ಹಬ್ಬಕ್ಕೆ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ನಂತರ ರಾಕ್‌ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಲಾಗಿತ್ತು. ನಂತರ ಹೈದರಾಬಾದ್‌ನಲ್ಲಿ ಸೆಕೆಂಡ್ ಶೆಡ್ಯೂಲ್ ಮುಗಿಸಿ ತಂಡಬೆಂಗಳೂರಿಗೆ ವಾಪಸ್ ಆಗಿತ್ತು. ಇತ್ತೀಚೆಗೆ ಕನಕಪುರದಲ್ಲಿ 15 ದಿನಗಳ ಕಾಲ ಚಿತ್ರದ ಕ್ರೂಷಿಯಲ್ ಸನ್ನಿವೇಶಗಳ ಚಿತ್ರೀಕರಣ ನಡೆದಿತ್ತು. ಇದೀಗ ಮೈಸೂರಿನ ಸುತ್ತೂರು ಬಳಿ ಚಿತ್ರೀಕರಣ ನಡೀತಿದೆ. ಡಿಸೆಂಬರ್‌ನಲ್ಲಿ ‘ಕಾಟೇರ’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.