408 total views
ಮೈಸೂರು:- ಮೈಸೂರು ಪತ್ರಿಕಾ ಭವನದಲ್ಲಿ ಶ್ರೀಮಂತ ಚಿತ್ರತಂಡದ ವತಿಯಿಂದ ಪತ್ರಿಕಾಗೋಷ್ಠಿಯನ್ನು ಇಂದು ನಡೆಸಿದರು.ಚಿತ್ರತಂಡದ ನಿರ್ದೇಶಕ ಸಂಜಯ್ ಬಾಬು ಮಾತನಾಡಿ ಶ್ರೀಮಂತ ಚಲನಚಿತ್ರ ರೈತರ ದೈನಂದಿನ ಬದುಕು ಹಾಗೂ ಭಾವನೆಯ ಅನಾವರಣವಾಗಿದ್ದು ರೈತನೇ ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಂದು ಸಾಕ್ಷಿಕರಿಸುವ ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ ಜಾತ್ರೆ ಹಾಗೂ ಹಬ್ಬ ಹಾಡು ಹಸಿ ಹಳ್ಳಿ ಆಟಗಳು ಗ್ರಾಮೀಣ ಕಲೆಗಳ ಸಂಭ್ರಮಗಳನ್ನು ನೆನಪಿಸುವುದರೊಂದಿಗೆ ಕರ್ನಾಟಕದ ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಸಂಭ್ರಮಗಳನ್ನು ತಿಳಿಸಿದ ಮೂಲಕ ಪ್ರೇಕ್ಷಕರ ಮನರಂಜಿಸುವುದು ಚಿತ್ರದ ಆಶಯವಾಗಿದೆ ಎಂದು ಹೇಳಿದರು. ಮುಖ್ಯ ಭೂಮಿಯಲ್ಲಿ ಭಾರತದ ರಿಯಲ್ ಹೀರೋ ಎನಿಸಿಕೊಂಡಿರುವ ಚಿತ್ರನಟ ಸೋನು ಸೂದ್ ರವರು ಪ್ರಪ್ರಥಮವಾಗಿ ಕನ್ನಡ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದು ನಾಯಕಿಯಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್ ವೈಷ್ಣವಿಚಂದ್ರನ್ ಮೆಣನ್ ಜೊತೆಗೆ ಕಲ್ಯಾಣ ಕರ್ನಾಟಕ ಕ್ರಾಂತಿ ಎಂಬ ಯುವ ಪ್ರತಿಭೆಯನ್ನು ಮುಖ್ಯ ಭೂಮಿಯಲ್ಲಿ ಪರಿಚಯಿಸುತ್ತಿದ್ದೇವೆ ಹಿರಿಯ ಕಲಾವಿದರುಗಳಾದ ರಮೇಶ್ ಭಟ್ ರವಿಶಂಕರ್ ಗೌಡ ಸಾಧುಕೋಕಿಲ ಚರಣ್ ರಾಜ್ ಕಲ್ಯಾಣಿ ಗಿರಿ ರಾಜು ತಾಳಿಕೋಟೆ ಕುರಿ ಬಾಂಡ್ ರಂಗ ಬ್ಯಾಂಕ್ ಮಂಜಣ್ಣ ಬಸವರಾಜು ಹಾಸನ್ ಮುಂತಾದವರು ಹಲವಾರು ಗ್ರಾಮೀಣ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ ಇದೊಂದು ಸಾಮೂದಾಯಿಕ ಚಿತ್ರವಾಗಿದ್ದು ಬಹು ಪಾಲು ನೈಜ ಲೊಕೇಶನ್ ಗಳಲ್ಲಿ ಚಿತ್ರೀಕರಿಸಲಾಗಿದೆ.ನಾದಬ್ರಹ್ಮ ಹಂಸಲೇಖ ಸಂಗೀತ ಸಾಹಿತ್ಯವಿದ್ದು ರವಿಕುಮಾರ್ ಛಾಯಾಗ್ರಹಣ ಕೆಎಮ್ ಪ್ರಕಾಶ್ ಸಂಕಲನ ಮಾಸ್ ಮಾದ ಸಾಹಸ ಮದನ್ ಹರಣಿ ಹಾಗೂ ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ ಏಪ್ರಿಲ್ನ ಎರಡನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು ಜೊತೆಯಲ್ಲಿ ಹೀರೋ ಕ್ರಾಂತಿ, ವಾಲ್ನಟ್ ಮಹೇಶ್, ರಾಮಸ್ವಾಮಿ ಭಾಗಿಯಾಗಿದ್ದರು