466 total views
ಹುಣಸೂರು ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾದ ಘಟನೆ ಹುಣಸೂರಿನ ಅರಸು ಕಲ್ಲಹಳ್ಳಿ ಗೇಟ್ ಬಳಿ ನಡೆದಿದೆ.ರಸ್ತೆ ಬದಿ ಜಮೀನಿನಲ್ಲಿರುವ ಮಾವಿನ ಮರದಲ್ಲಿ ಸುಮಾರು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಆತ್ಮಹತ್ಯೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.ಅಪರಿಚಿತ ವ್ಯಕ್ತಿಯ ಮಾಹಿತಿಗಾಗಿ ಹುಣಸೂರಿನಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯತ್ನಿಸುತ್ತಿದ್ದಾರೆ.ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.