314 total views
ಕೂಳುಬಾಕ ತಹಸಿಲ್ದಾರ್ ಭಾಗ-೨
*ಬಡ ರೈತರ ಪಾಲಿನ ರಕ್ಷಸ :ಕೊಟ್ಟೂರು ತಹಸಿಲ್ದಾರ್ ಕುಮಾರಸ್ವಾಮಿ *
ವೃದ್ಧರ ಮಹಿಳೆಯರಿಗೆ ಕ್ರೂರ ಮೃಗದಂತೆ ವರ್ತಿಸುವ ತಹಸಿಲ್ದಾರ್ ಕುಮಾರಸ್ವಾಮಿ
ಜಮೀನುಗಳ, ವಸತಿ
ವಿನ್ಯಾಸಕ್ಕೆ ಪರ್ಸೆಂಟೇಜ್ನಲ್ಲಿ ಹಣ ಪಡೆಯುವ ತಹಸಿಲ್ದಾರ್ ಎಂ ಕುಮಾರಸ್ವಾಮಿ
ಸಂಘ ಸಂಸ್ಥೆಗಳ ಮೇಲೆ ಉರಿ ಬೀಳುವ :ಅರ್ಧಬರ್ಧ ತಹಸಿಲ್ದಾರ್ ಎಂ ಕುಮಾರಸ್ವಾಮಿ
ಸದಕಾಲ ಬಡವರ ಹೊಟ್ಟೆ ಹೊಡೆದು, ಹಣ ಮಾಡುವ ತಹಸಿಲ್ದಾರ್ ಕುಮಾರಸ್ವಾಮಿ ಕೊಟ್ಟೂರು ತಾಲೂಕಿನ ಜನರು ಶಾಪಕ್ಕೆ ಗುರಿಯಾಗಿದ್ದಾರೆ.! ದುರಂಕಾರ ಮಧದಲ್ಲಿರುವ ಈ ಕುಮಾರಸ್ವಾಮಿ ಕೊನೆ ಪಕ್ಷ ಕಚೇರಿಗೆ ಬರುವ ಮಹಿಳೆಯರಿಗೆ, ವೃದ್ಧರ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೆ, ಅಸಭ್ಯವಾಗಿ ವರ್ತಿಸುವ ಈತ ಬಡವರ ಪಾಲಿನ ರಕ್ಷಸನಾಗಿ ಮೆರೆಯುತ್ತಿದ್ದನೆ.! ಇಂತಹ ಕ್ರೂರ ಮೃಗವನ್ನು ಆದಷ್ಟು ಬೇಗ ಸಸ್ಪೆಂಡ್ ಮಾಡುವಂತಹ ಕೆಲಸ ಅದ್ಯಾವ ಅಧಿಕಾರಿ ಮಾಡುವರೋ ಎಂದು ಕೊಟ್ಟೂರಿನ ಜನರು ಕಾದು ನೋಡುತ್ತಿದ್ದಾರೆ.
ಇನ್ನು ಈ ಮಹಾನುಭಾವ ಜಮೀನುಗಳ, ವಸತಿ
ವಿನ್ಯಾಸಕ್ಕೆ ಪರ್ಸೆಂಟೇಜ್ ಲೆಕ್ಕದಲ್ಲಿ ದುಡ್ಡು ಕೀಳುವುದು ಈತನ ಖಾಯಾಲಿ. ಸುಲಭವಾಗಿ ಪರ್ಮಿಷನ್ ನೀಡಿ,
ಅವರಿಂದ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ಕೇಳುತ್ತಾನೆ. ಈ ತಹಸೀಲ್ದಾರ್ ?
ಕೊಟ್ಟೂರಿನ ಮಟ್ಟಿಗೆ ತಹಶೀಲ್ದಾರರು ನುಂಗಲಾರದ ತುತ್ತಾಗಿರುವುದರಿಂದ ಈ ವರದಿಯನ್ನು ನೋಡಿಯಾದರೂ ಸರ್ಕಾರ, ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆಯಿಂದಲೇ ಈ ಸರದಿ ವರದಿಗಳನ್ನು ಪತ್ರಿಕೆಯು ಭಿತ್ತರಿಸುತ್ತಿದೆ. ಸರ್ಕಾರ, ಮೇಲಾಧಿಕಾರಿಗಳು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಈ ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂಬುದು ವರದಿಯ ಉದ್ದೇಶವಾಗಿದೆಯೇ ಹೊರತು ಯಾವುದೇ ವೈಯಕ್ತಿಕ ದ್ವೇಷ ಭಾವನೆಗಳು ಇರುವುದಿಲ್ಲ. ಕೊಟ್ಟೂರು ತಾಲ್ಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸದ ತಹಶೀಲ್ದಾರರು ನಮಗೆ ಬೇಡವೆಂದು ಕೊಟ್ಟೂರಿನ ಜನ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. !
ತಾಲೂಕಿನ ವ್ಯಾಪ್ತಿಗೆ ಬರುವ ಕಾಳಾಪುರ ಗ್ರಾಮದಲ್ಲಿ ವಿಂಡ್ ಫ್ಯಾನುಗಳನ್ನು ಕಾನೂನು ಬಾಹಿರವಾಗಿ ಸರ್ಕಾರಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಅಳವಡಿಸಲಾಗಿದೆ ಇದರ ಬಗ್ಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ? ಈ ಬಗ್ಗೆ ರೈತರು ದೂರು ನೀಡಿದ್ದರೂ ಸಹ ತಹಸಿಲ್ದಾರ್ ಅವರು ಲಕ್ಷಗಟ್ಟಲೆ ಇನಾಮು ಪಡೆದು !? ವಿಂಡ್ ಫ್ಯಾನಿನ ಕಂಪನಿಗಳಿಗೆ ಪರವಾನಿಗೆ ನೀಡಿದ್ದಾರೆ ? ಎಂದು ಕಾಳಾಪುರ ಗ್ರಾಮದ ರೈತರು ಆರೋಪಿಸಿದ್ದಾರೆ.?
ತಾಲೂಕಿನ ಎಲ್ಲ ಕಡೆಯೂ ಅಕ್ರಮ ಮರಳು ಸಾಗಾಣಿಕೆ ಅತಿ ಹೆಚ್ಚಾಗಿ ನಡೆಯುತ್ತಿದ್ದು. ಅಕ್ರಮ ಮರಳುಗಾರಿಕೆಯನ್ನು ರಾಜ ರೋಷವಾಗಿ ಮಾಡುತ್ತಾ, ಸಂಬಂಧಿಸಿದ ಅಧಿಕಾರಿಗಳಿಗೆ ಭಕ್ಷೀಸು ನೀಡುತ್ತಾ ತಮ್ಮ ಕೆಲಸವನ್ನು ಆಗು ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲವನ್ನು ಕಂಡೂ ಕಾಣದಂತೆ ಮೂಕಪ್ರೇಕ್ಷಕರಾಗಿ ಮೇಲಾಧಿಕಾರಿಗಳು ಕುಳಿತಿದ್ದಾರೆ. ಇದನ್ನು ಸಾರ್ವಜನಿಕರು ತಹಶೀಲ್ದಾರರ ವರ್ತನೆ ಬಗ್ಗೆ ಹಿಡಿಶಾಪ ಹಾಕುತ್ತಾ, ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರಲ್ಲಿ ದೂರುವುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಡ ರೈತನೊಬ್ಬ ತನ್ನ ಜಮೀನಿನ ವಿಷಯವಾಗಿ ನ್ಯಾಯಾಲಯದ ಮೊರೆ ಹೋಗಿ ಡಿಕ್ರಿ ಆದೇಶ ಪಡೆದು, ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದರೆ, ಕೋರ್ಟ್ ಆದೇಶಕ್ಕೆ ತಲೆಬಾಗದೇ ವಿಳಂಬ ಧೋರಣೆ ಅನುಸರಿಸಿ, ಇನ್ನೊಬ್ಬರ ಹೆಸರಿಗೆ ಖಾತೆ ಬದಲಾವಣೆ ಮಾಡಿ, ನಂತರ ನ್ಯಾಯಾಲಯದ ಆದೇಶಕ್ಕೆ ಹೆದರಿ, ಮತ್ತೇ ಅದೇ ಜಮೀನಿಗೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡುವುದು ಎಂದು ಆದೇಶ ಮಾಡಿರುವುದು ಎಷ್ಟು ಸರಿ? ಅನಕ್ಷರಸ್ಥರಾದ ರೈತರಿಗೆ ಈ ರೀತಿ ಮಾಡಿದರೆ ಯಾರ ಹತ್ತಿರ ತಮ್ಮ ಕಷ್ಟವನ್ನು ಹೇಳಿಕೊಳ್ಳುವುದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ರೀತಿಯಾಗಿ ವರ್ತಿಸಿದರೆ ಅನಕ್ಷರಸ್ಥ ಬಡ ರೈತರು ಇಂತಹ ಪರಿಸ್ಥಿತಿಗಳಿಗೆ ಸತ್ತು ಹೋಗುವ ಸನ್ನಿವೇಶಗಳು ಬರಬಹುದು ಇಂತಹ ತಹಸಿಲ್ದಾರರವರು ಏನೂ ತಿಳಿಯದ ರೈತರಿಗೆ ನೇಣು ಅಗ್ಗದ ಕುಣಿಕೆ ಕೊಡುವುದಕ್ಕೂ ಹೇಸದ ಇಂತಹ ಅಧಿಕಾರಿ ರೈತರಿಗೆ ಮಾರಕ?
ಈ ಹಿಂದೆ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆ ಕುಂದು ಕೊರತೆಗಳ ಬಗ್ಗೆ ಕೇಳಲಿಕ್ಕೆ ತಹಶೀಲ್ದಾರರ ಬಳಿ ಹೋದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಮೊಬೈಲ್ಗಳನ್ನು ಕಸಿದುಕೊಂಡು ಪೊಲೀಸರನ್ನು ಕರೆಸಿ ಅವರುಗಳ ಮೇಲೆ ಕೇಸ್ ದಾಖಲು ಮಾಡಿ ಎಂದು ಹಿಟ್ಲರ್ ರೀತಿಯ ವರ್ತನೆ ಮಾಡಿದ್ದಾರೆ. ಸಂಘ-ಸಂಸ್ಥೆ, ಸಂಘಟನೆಗಳು ಮನವಿ ಕೊಡಲು ಹೋದರೆ ತಾವುಗಳು ಕಚೇರಿಯಲ್ಲಿ ಇದ್ದರೂ ಸಹ ಮನವಿಯನ್ನು ಟಪಾಲಿನಲ್ಲಿ ಕೊಟ್ಟು ಹೋಗಿ ಎಂದು ಹೇಳುತ್ತಾರೆ.
ಯಾರಾದರೂ ಇವರ ವಿರುದ್ಧ ಸುದ್ದಿಗೋಷ್ಠಿ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿರುವ ವರದಿಯನ್ನು ಪತ್ರಕರ್ತರು ಪತ್ರಿಕೆಗಳಲ್ಲಿ ಬಿತ್ತರಿಸಿದರೆ ಅಂತಹ ಪತ್ರಕರ್ತರ ವಿರುದ್ಧ ಕೇಸ್ ದಾಖಲು ಮಾಡುತ್ತೇನೆಂದು ಬೆದರಿಸುವುದು, ಪತ್ರಕರ್ತರು ಹೊಸ ಪತ್ರಿಕೆಗಾಗಿ ಅರ್ಜಿ ಸಲ್ಲಿಸಿ, ವರಿಫಿಕೇಶನ್ಗಾಗಿ ತಹಶೀಲ್ದಾರರ ಹತ್ತಿರ ಬಂದು ವರ್ಷವಾದರೂ ಆ ಕಡತವನ್ನು ತಮ್ಮಲ್ಲೇ ಉಳಿಸಿಕೊಂಡಿರುವ ತಹಶೀಲ್ದಾರರು ತಮ್ಮ ವಿರುದ್ಧ ಬರೆಯುವ ಪತ್ರಕರ್ತರಿಗೆ ಬೆದರಿಕೆ ಹಾಕಿ ಅವರ ಪ್ರತಿಧ್ವನಿಯನ್ನು, ಪ್ರಶ್ನೆ ಮಾಡುವ ಸ್ವಾತಂತ್ರ್ಯವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡು ಪ್ರಜಾಪ್ರಭುತ್ವದ ಅಂಶಗಳನ್ನು ಗಾಳಿಗೆ ತೂರಿ ತಾವೇ ಸರ್ವಾಧಿಕಾರಿಯ ರೀತಿ ವರ್ತಿಸುತ್ತಿದ್ದಾರೆ.
ಸರ್ಕಾರ ಇಂತಹ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಾಲ್ಲೂಕಿನ ಜನರ ಹಿತ ಕಾಪಾಡಬೇಕು, ಇಲ್ಲದೇ ಹೋದರೆ ಮುಂದೆ ಆಗುವ ಎಲ್ಲಾ ಅನಾಹುತಗಳಿಗೂ ಮೇಲಾಧಿಕಾರಿಗಳು ಮತ್ತು ಸರ್ಕಾರವೇ ನೇರ ಜವಾಬ್ದಾರಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ?