392 total views
ಅಭಿಮಾನಿಗಳು ಪರಮಾತ್ಮನ ಜನ್ಮದಿನವನ್ನು ಪುಣ್ಯ ಕಾರ್ಯಗಳಿಂದ ಅಪ್ಪು ಹುಟ್ಟುಹಬ್ಬ ಆಚರಣೆ
ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದ ಶ್ರೀ ನೀಲಕಂಠೇಶ್ವರ ಭವನದಲ್ಲಿ ಕರ್ನಾಟಕದ ರಾಜರತ್ನ ಎಂದೇ ಖ್ಯಾತರಾಗಿದ್ದ ನಟ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದೂವರೆ ವರ್ಷ ಕಳೆದಿದೆ, ಒಂದೂ ವರ್ಷದ ಹಿಂದೆ ನಮ್ಮನ್ನೆಲ್ಲ ಅಗಲಿದ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಹಿರೇಮುರಾಳ ಗ್ರಾಮದ ಅಭಿಮಾನಿಗಳಿಂದ ವಿಭಿನ್ನವಾಗಿ ಆಚರಿಸಲಾಯಿತು ಆಚರಣೆಯಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳು ಪರಮಾತ್ಮನ ಜನ್ಮದಿನವನ್ನು ಆಚರಿಸಿದರು ಹಾಗೂ ಹಿರಿಯರಿಗೆ ಸನ್ಮಾನ ಮಾಡಲಾಯಿತು, ಡಾ. ಪುನೀತ್ ರಾಜಕುಮಾರ್ ಅವರನ್ನು ಉದ್ದೇಶಿಸಿ ಶ್ರೀ. ಬಿ.ಬಿ ಪಾಟೀಲ್ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಅವರು ಮಾತನಾಡಿದರು ಪುನೀತ್ ರಾಜಕುಮಾರ್ ರವರು 1975 ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಡಾ. ರಾಜಕುಮಾರ್ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಅಜಿತ್ ವಿ ಜೋಶಿ. ನಿವೃತ್ತ ಶಿಕ್ಷಕರು ಬಸವರಾಜ ಬಾಗೇವಾಡಿ. ಜೆಸ್ಕಾಂ ನಿವೃತ್ತ ಹಿರಿಯ ಸಹಾಯಕರು ಜಿ.ಕೆ.ಲಿಂಗದಹಳ್ಳಿ ಅಕ್ಬರ್ ಮುಲ್ಲಾ ಕಲಾಂ ಬ್ಯಾಂಕ್ ಅಧ್ಯಕ್ಷರು ವಿರೇಶ್ ಬಾಗೇವಾಡಿ, ಪೀರ್ ಸಾಬ್ ಮುಲ್ಲಾ , ಕಲಾಂ ಬ್ಯಾಂಕ್ ನಿರ್ದೇಶಕರು ಬಸವಂತರಾಯ ನಾಗರತ್ತಿ ಹಾಗೂ ಹಿರೇಮುರಾಳದ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಪರಶು ಚಲವಾದಿ ಹಿರೇಮುರಾಳ