396 total views
ಮೈಸೂರು :- ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ವಿಶೇಷವಾಗಿ ಬಿಡುಗಡೆಯಾದ ಅನುದಾನದಲ್ಲಿ ಬೋಗಾದಿ ರಸ್ತೆಯಲ್ಲಿರುವ ಕುಕ್ಕರಹಳ್ಳಿ ಮಡಿವಾಳ ಮಾಚಿದೇವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಾಗಿ 10 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆಯನ್ನು ನೆರವೇರಿಸಿದವು. ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ರೂ:15.00 ಲಕ್ಷ ವೆಚ್ಚದಲ್ಲಿ ಪಡುವಾರಹಳ್ಳಿ-ವಿನಾಯಕ ನಗರದಲ್ಲಿರುವ ನಾಯಕ ಜನಾಂಗದ ಕ್ಷೇಮಾಭಿವೃದ್ದಿ ಸಂಘಕ್ಕೆ ಸೇರಿದ ಶ್ರೀರಾಮ ಮಂದಿರ ಕಟ್ಟಡದ ಉಧ್ಘಾಟನೆಯನ್ನು ನೆರವೇರಿಸಿ, ನಂತರ ಕುಂಬಾರಕೊಪ್ಪಲು ರಾಮಮಂದಿರದ (ಗುಂಡಪ್ಪಗೌಡರ ಮನೆ ಪಕ್ಕ) ಮುಂಬಾಗದಲ್ಲಿ ಎಸ್.ಎಫ್.ಸಿ ವಿಷೇಶ ಅನುದಾನದಲ್ಲಿ ಕುಂಬಾರಕೊಪ್ಪಲು ಬಸ್ ರೂಟ್ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳ ಡಾಂಬರೀಕರಣ ಕಾಮಗಾರಿಯ ರೂ. 100.00 ಲಕ್ಷದ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ನಾಗೇಂದ್ರ ಅವರು ನೆರವೇರಿಸಿದರು.