506 total views
ವಿಶೇಷ ವರದಿ
ಶಿವಮೊಗ್ಗ, ಮಾರ್ಚ್ 17
ಅರೋಗ್ಯ, ರಕ್ಷಣಾ, ಕಾರ್ಮಿಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅನುಮತಿಯ ಮೇರೆಗೆ ಆರಂಭಗೊಳ್ಳಬೇಕಿರುವ ಸ್ಪಾ ಗಳು ಅಂದರೆ ಮಸಾಜ್ ಮಾಡುವ ಕೇಂದ್ರಗಳು ಶಿವಮೊಗ್ಗದಲ್ಲಿ ವ್ಯಾಪಕವಾಗಿದೆ, ಇಲ್ಲಿನ ಕೆಲವು ಸ್ಪಾಗಳಲ್ಲಿ ಅಕ್ರಮವಾಗಿ ಮಸಾಜ್ ನೆಪದಲ್ಲಿ ಸೆಕ್ಸ್ ದಂದೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆಗಮಿಸಿದ್ದಾರೆ.
ಮನಸ್ಸಿಗೆ ಮುದ ನೀಡುವ ಏಕಾಂತತೆಯನ್ನು ಅನುಭವಿಸುವಂತೆ ಮಾಡುವ, ಹಾಗೂ ದೈಹಿಕ ಆರೋಗ್ಯವನ್ನು ಸುಧಾರಿಸುವ, ದೇಹದ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಆರೋಗ್ಯಕರ ವಿಷಯಗಳ ಅಂಶದಿಂದ
ಆರಂಭಗೊಂಡಿರುವ ಸ್ಪಾ ಶಿವಮೊಗ್ಗ ನಗರದಲ್ಲಿ 90 ಕಿಂತ ಹೆಚ್ಚಾಗಿದ್ದು ಅವುಗಳ ಆರಂಭಕ್ಕೆ ಅನುಮತಿ ಪಡೆಯಬೇಕಾದ ಯಾವುದೇ ಬಗೆಯ ನಿಯಮಗಳು ಬಹಳಷ್ಟು ಕಡೆ ಪಾಲನೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಸ್ಪಾ ಗಳು ಸರ್ಕಾರದ ಹಲವು ಇಲಾಖೆಗಳಿಂದ ಅನುಮತಿಯನ್ನು ಪಡೆಯುವ ಜೊತೆಗೆ ವಿಶೇಷವಾಗಿ ಆರೋಗ್ಯ ಇಲಾಖೆಯಿಂದ ನೋಂದಣಿ ಪಡೆದಿರಬೇಕು. ಅದರ ಜೊತೆಗೆ ಅಲ್ಲೇ ತರಬೇತಿ ನೀಡುವಂತಹ ವ್ಯಕ್ತಿಗಳು ಅಧಿಕೃತವಾದ ತರಬೇತಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಇಂತಹ ಪ್ರಮಾಣ ಪತ್ರ ಪಡೆದವರ ಸಂಖ್ಯೆ ಬಹಳಷ್ಟು ಸ್ಪಾ ಗಳಲ್ಲಿ ಇಲ್ಲ ಎಂಬುದು ಮತ್ತೊಂದು ದೊಡ್ಡ ಆರೋಪ. ಶಿವಮೊಗ್ಗದ ಈ ಸ್ಪಾ ಗಳ ಬಗ್ಗೆ ಹೇಳುವ ಮೊದಲು 30 ರಿಂದ 45 ನಿಮಿಷ ನಿಮಿಷದೊಳಗೆ ಮುಗಿಯುವ ಮಸಾಜ್ ಕಾರ್ಯವು ನಿರಂತರವಾಗಿ ನಡೆಯುತ್ತಿದೆ ಎನ್ನಲಾಗಿದ್ದು, ಅದರಲ್ಲಿನ ಮಸಾಜ್ ಗಳು ವಿಭಾಗಗಳು ತುಂಬಾ ಚಿತ್ರ ವಿಚಿತ್ರ ಎಣಿಸುವಂತೆ ಕಾಣಿಸಿಕೊಳ್ಳುತ್ತೇವೆ ಎಂದು ಆರೋಪಿಸಲಾಗಿದೆ. ಪೋಲಿಸ್ ಇಲಾಖೆ ಶಿವಮೊಗ್ಗದ ಎಲ್ಲಾ ಸ್ಪಾಗಳ ಮಾಲೀಕರನ್ನು ಒಂದೆಡೆ ಸೇರಿಸಿ ಅವರೊಂದಿಗೆ ಸಭೆ ನಡೆಸಿದಾಗ ಬಹಳಷ್ಟು ಸ್ಪಾಗಳ ಅನುಮತಿ ಪೂರಕ ದಾಖಲೆಗಳು, ತರಬೇತಿಪಡೆದ ಬಗ್ಗೆ ಪ್ರಮಾಣ ಪತ್ರಗಳು ಹೆಚ್ಚಿನ ಭಾಗ ಕಾಣಿಸಿಕೊಳ್ಳಲಿಲ್ಲ ಎನ್ನಲಾಗಿದ್ದು ಪೊಲೀಸ್ ಇಲಾಖೆ ಸೂಕ್ತ ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಈ ಕೆಲಸದ ಬಗ್ಗೆ ವಿಶೇಷವಾಗಿ ಹೇಳಲೇಬೇಕು ಎಂದರೆ ಇಲ್ಲಿ ಮಸಾಜ್ ಹೆಸರಿನ ಜೊತೆ ಸೆಕ್ಸ್ ದಂದೆ ಕೂಡ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಹಲವರು ಪತ್ರಿಕೆಗೆ ತಿಳಿಸಿದ ಮಾಹಿತಿಯಾಗಿರುತ್ತದೆ.
ಅಂತೆಯೇ ಇಲ್ಲಿ ಸೆಕ್ಸ್ ದಂದೆ ನಡೆಸಲು ಅನುಮತಿ ಇದೆಯೇ ಎಂದು ಪ್ರಶ್ನಿಸುವ ಅನಿವಾರ್ಯತೆ ಬಂದಿದೆ.
ದೇಹದ ಆರೋಗ್ಯವನ್ನು ಸುಧಾಸಿಕೊಳ್ಳುವ, ಮತ್ತು ಮಾನಸಿಕ ಸ್ತೀಮಿತಉತ್ತಮಗೊಳಿಸುವ ಸ್ಪಾ ಗಳು ಇದರ ಮೂಲಕ ಹೊಸದೊಂದು ದಂದೆ ಆರಂಭಿಸಿ ಮತ್ತೊಂದು ಬಗೆಯ ಹೊಸ ತಿರುನತ್ತ ಹೆಜ್ಜೆ ಹಾಕಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ.
ಅನುಮತಿ ರಹಿತ ಹಾಗೂ ಸೂಕ್ತ ಪರವಾನಿಗೆ ಪಡೆಯದ ಮತ್ತು ಪ್ರಮಾಣ ಪತ್ರ ಇಲ್ಲದ ಸ್ಪಾ ಗಳಿಂದ ಇನ್ನು ಯಾವ ಬಗೆಯ ವ್ಯವಹಾರ ನಡೆಯಬಹುದು ಎಂದು ಹೇಳಬಹುದು. ತರಬೇತಿಯೇ ಇಲ್ಲದ ತರಬೇತಿದಾರರಿಂದ ಯಾವ ಚಿಕಿತ್ಸೆ ದೊರೆಯುವುದು ಎಂಬ ಅನುಮಾನ ಪ್ರಶ್ನೆ ಮೂಡುತ್ತಿದೆ.
ಕನಿಷ್ಠ ಮಸಾಜಿನ ದಿನದ ವ್ಯವಹಾರದ ದರ ಲೆಕ್ಕಾಚಾರವನ್ನು ಪ್ರತಿಯೊಬ್ಬರಿಗೂ ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ದಂದೆ ಯಾವುದೇ ಲೆಕ್ಕಗಳ ಬಹಳಷ್ಟು ಭಾಗ ಯಾವುದೇ ದಾಖಲೆಗಳಲ್ಲಿ ನೊಂದಣಿ ಆಗಿರುವುದಿಲ್ಲವಂತೆ. ಮಾಮೂಲಿ ಮಸಾಜ್ ಗೆ ಎಂಬಂತೆ ನೋಂದಣಿ ಬಿಲ್ ನೀಡುವ ಸಂಸ್ಥೆಗಳು ಸೆಕ್ಸ್ ಆಟಕ್ಕೆ ಯಾವುದೇ ಬಿಲ್ ನೀಡುವುದಿಲ್ಲವಂತೆ.
ಶಿವಮೊಗ್ಗದ ಹಾದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಇಂತಹ ಸ್ಪಾ ಗಳು ಆರಂಭಗೊಳ್ಳುತ್ತಿದ್ದು ಅವುಗಳ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಲಾಗಿದೆ ಇಲ್ಲವಾದಲ್ಲಿ ಸ್ಪಾ ಹೆಸರಿನ ಸೆಕ್ಸ್ ದಂದೆ ಒಂದು ಉದ್ಯಮವಾಗಿ ಬೆಳೆಯುವ ಎಲ್ಲಾ
ಸಾಧ್ಯತೆಗಳಿವೆಅಲ್ಲವೇ ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಕೂಡಲೇ ಇಂತಹ ಗಮನಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ