372 total views
ಜೇವರ್ಗಿತಾಲ್ಲೂಕಿನ ಹಿತಕ್ಕಾಗಿ ಜನಸಾಮಾನ್ಯರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ ಹಾಗೂ ಅವಶ್ಯವಾಗಿದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳು ಕಳೆದರೂ ಇನ್ನು ಕಟ್ಟಕಡೆಯ ತಾಲೂಕು ಜೇವರ್ಗಿ ತಾಲೂಕು ಯಾವುದೇ ರೀತಿಯಿಂದ ಅಭಿವೃದ್ಧಿ ಆಗಿಲ್ಲ ಜನಸಾಮಾನ್ಯರ ಕೆಲಸಗಳು ರಾಜಕೀಯ ಹಿಂಬಾಲಕರು ಆ ಪಕ್ಷದ ಕಾರ್ಯಕರ್ತರು ಹೇಳಿದರೆ ಮಾತ್ರ ಆಗುತ್ತದೆ ಅದು ಕೆಲವು ಪಕ್ಷದವರಿಗೆ ಮಾತ್ರ ಸೀಮಿತವಾಗಿದೆ. ಅಷ್ಟೇ ಅಲ್ಲದೆ ಜೇವರ್ಗಿ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ ಹಾಗೂ ವಾಹನ ಸೌಕರ್ಯವಿಲ್ಲ ಸರ್ಕಾರಿ ಆಸ್ಪತ್ರೆಗಳಿಲ್ಲ. ಹಳ್ಳಿಯಿಂದ ಪಟ್ಟಣಕ್ಕೆ ಹೋಗಬೇಕಾದರೆ ರೈತರು ಹಾಗೂ ವಿದ್ಯಾರ್ಥಿಗಳು ಪರದಾಡಬೇಕಾದ ಪರಿಸ್ಥಿತಿ ಜೇವರ್ಗಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಯಡ್ರಾಮಿ ತಾಲೂಕು ಹೆಸರಿಗೆ ಮಾತ್ರ ಘೋಷಣೆಯಾಗಿದೆ ಇಲ್ಲಿ ಇದಕ್ಕೆ ಸಂಬಂಧಪಟ್ಟ ಕಚೇರಿಗಳು ಮಾತ್ರ ಇನ್ನು ಸ್ಥಾಪನೆಯಾಗಿಲ್ಲ ಹಣಕಾಸಿಗೆ ಸಂಬಂಧಪಟ್ಟ ರಾಷ್ಟ್ರೀಕೃತ ಬ್ಯಾಂಕುಗಳು ಸಹಿತ ಯಡ್ರಾಮಿ ತಾಲೂಕಿನಲ್ಲಿ ಇಲ್ಲದಿರುವುದು ನಾಚಿಕೆಗೇಡುತನ ಸಂಗತಿ. ಎಂದು ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮ ಪಂಚಾಯಿತಿ ಸದಸ್ಯರಾದ ಹಳ್ಳೆಪ್ಪ ಕಟ್ಟಿಮನಿ ಅವರು ನೇರವಾಗಿ ಆರೋಪಿಸಿದ್ದಾರೆ ಹಾಗೂ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಮತಕ್ಷೇತ್ರ ಸಂಖ್ಯೆ 35 ಜೇವರ್ಗಿ ತಾಲೂಕಿನ ವಿಧಾನಸಭೆ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿ ಯನ್ನು ಆಯ್ಕೆ ಮಾಡಿ ಬದಲಾವಣೆ ಬಯಸುವುದು ಅನಿವಾರ್ಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ