366 total views
ಶಿಡ್ಲಘಟ್ಟ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಸಿಕಲ್ ರಾಮಚಂದ್ರಗೌಡ ಅವರ ಸಹೋದರ ಆನಂದ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು
ಶಿಡ್ಲಘಟ್ಟ ನಗರಕ್ಕೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಬಸ್ಸ್ ಗೆ ಕ್ರೈ ನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕಿ ಬರಮಾಡಿಕೊಂಡರು.
ಮಯೂರ ವೃತ್ತದಲ್ಲಿರುವ ಸೇವಾಸೌದ ಕಚೇರಿಯನ್ನು ಸಚಿವರಾದ ಆರ್ ಅಶೋಕ ಮತ್ತು ಡಾಕ್ಟರ್ ಕೆ ಸುಧಾಕರ್ ಮತ್ತು ಸಂಸದ ಎಸ್ ಮುನಿಸ್ವಾಮಿ ರವರು ಉದ್ಘಾಟಿಸಿದರು..
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಹೊರಟ ರಥಯಾತ್ರೆಯ ನಗರದ ಕೋಟೆ ವೃತ್ತದ ವರೆಗೆ ಸಾಗಿತು ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
ಕಾರ್ಯಕ್ರಮದಲ್ಲಿ ಸಿಕಲ್ ರಾಮಚಂದ್ರಗೌಡ ರವರು ಮಾತನಾಡಿ ಬಿಜೆಪಿ ಪಕ್ಷವನ್ನು ಬಲಗೊಳಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯ ಸಂಪೂರ್ಣ ಬೆಂಬಲದ ಸರ್ಕಾರ ಬರಲು ನಾವು ನೀವೆಲ್ಲ ಶ್ರಮಿಸಿ. ರಾಜ್ಯಕ್ಕೆ ಜೂನಿಯರ್ ಮೋದಿಯನ್ನು ಕೊಡಬೇಕೆಂದು ತಿಳಿಸಿದರು..
ನಂತರ ಸಚಿವರಾದ ಆರ್ ಅಶೋಕ್ ರವರು ಮಾತನಾಡಿ ಅಧಿಕಾರ ಕೊಟ್ಟರೂ ಸರಿಯಾಗಿ ಕೆಲಸ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ 14 ತಿಂಗಳು ಎನು ಅಭಿವೃದ್ಧಿ ಮಾಡಿಲ್ಲ ಅಭಿವೃದ್ಧಿ ಹರಿಕಾರ ಸಚಿವ ಸುಧಾಕರ್ ಅವರಿಗೆ ಶಿಡ್ಲಘಟ್ಟ ಚುನಾವಣಾ ಉಸ್ತುವಾರಿ ನೀಡಿದ್ದು ಕ್ಷೇತ್ರದಲ್ಲಿ ಬದಲಾವಣೆ ತಂದು ಬಿಜೆಪಿ ಬಲಪಡಿಸಿ ಎಂದರು.
ಆರೋಗ್ಯ ಸಚಿವ ಡಾಕ್ಟರ್ ಕೆ ಸುಧಾಕರ್ ಅವರು ಮಾತನಾಡಿ ಮತದಾರರು ಬಿಜೆಪಿ ಪಕ್ಷಕ್ಕೆ ಮತ ನೀಡಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ದೇಶವನ್ನು ಬಲಪಡಿಸಿದ್ದಂತವಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಏನೇನು ಮಾಡಿಲ್ಲ ಎಂದು ಅಶೋಕ ವ್ಯಕ್ತಪಡಿಸಿದರು..
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ಸ್ಕೂಲ್ ದೇವರಾಜ್, ಛಲವಾದಿ ನಾರಾಯಣಸ್ವಾಮಿ, ಸಚ್ಚಿದಾನಂದ ಮೂರ್ತಿ, ತಾಲೂಕ ಅಧ್ಯಕ್ಷ ಸುರೇಂದ್ರ ಗೌಡ, ನಂದೀಶ್, ನಗರಸಭಾ ಸದಸ್ಯರಾದ ರಾಘವೇಂದ್ರ, ನಾರಾಯಣಸ್ವಾಮಿ, ಡಾ. ಸತ್ಯನಾರಾಯಣ ರಾವ್, ಹಾಗೂ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ .ವೆಂಕಟೇಶ್ .ಸಿ