341 total views
ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಕೇಶವ ಆಚಾರ್ಯ ಅವರಿಗೆ ರೂ. 1.00 ಲಕ್ಷ ಸಹಾಯಧನ ಶಾಸಕ ರಘುಪತಿ ಭಟ್ ಹಸ್ತಾಂತರ
ಯಕ್ಷ ಶಿಕ್ಷಣ ಟ್ರಸ್ಟ್ ನ ಅಭಿಯಾನದ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವ ಆಚಾರ್ಯ ಅವರಿಗೆ ಎರಡು ತಿಂಗಳ ಹಿಂದೆ ವಾಹನ ಅಪಘಾತವಾಗಿ ಅಸೌಖ್ಯದಿಂದ ಮನೆಯಲ್ಲಿದ್ದು, ಶಾಸಕರು, ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ಅವರು ಇಂದು ದಿನಾಂಕ 15-03-2023 ರಂದು ಅವರ ಮನೆಗೆ ಭೇಟಿ ನೀಡಿ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ರೂ. 1.00 ಲಕ್ಷ ವೈದ್ಯಕೀಯ ನೆರವನ್ನು ನೀಡಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ್ ರಾವ್, ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ಬಿ. ಭುವನಪ್ರಸಾದ್ ಹೆಗ್ಡೆ, ನರಸಿಂಹ ತುಂಗಾ, ರಘುರಾಮ್ ಬೈಕಾಡಿ, ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್ ಉಪಸ್ಥಿತರಿದ್ದರು.