308 total views
ಕಾಳಗಿ:ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳೇಶ್ವರ ದೇವಸ್ಥಾನದ ಹಳ್ಳದಲ್ಲಿ ಅಂದಾಜು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಗುರುತು ಸಿಕ್ಕಿದ್ದಲ್ಲಿ ಈ ಕೆಳಗಿನ HBದೂರವಾಣಿಗೆ ಸಂಪರ್ಕಿಸಿ:-9480803572 / 9480803542..ಪಟ್ಟಣದ ನೀಲಕಂಠ ಕಾಳೆಶ್ವರ ದೇವಸ್ಥಾನದ ಹತ್ತಿರ ಇರುವ ಹಳ್ಳದಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆಯಲ್ಲಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಕಾಳಗಿ ಗ್ರಾಮದಲ್ಲಿ ನಡೆದಿದೆ.
ಹಳ್ಳದಲ್ಲಿ 10 ರಿಂದ 15 ಅಡಿ ಆಳವಿದ್ದು, ಕೆಸರು ಹೂಳಿನಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾರದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಾಳಗಿ ಪಿಎಸ್ಐ ವಿಶ್ವನಾಥ ಬಕಾಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಮಹೇಶ ರೆಡ್ಡಿ,ಸತೀಶ, ಮಾರುತಿ, ಮಂಜುನಾಥ, ಬಸಪ್ಪ ಓಬಲೇಶ ಇದ್ದರು.