340 total views
ಕಲಬುರಗಿ : ಶ್ರೀ ಶಕ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಆವರಣದಲ್ಲಿ ಉದ್ಯೋಗ ಮಾರ್ಗದರ್ಶಿ ಕೇಂದ್ರವನ್ನು ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪ ಅವರ ಅಮೃತ ಹಸ್ತದಿಂದ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಈ ಉದ್ಯೋಗ ಮಾರ್ಗದರ್ಶಿ ಕೇಂದ್ರವು ಕಲ್ಯಾಣ ಕರ್ನಾಟಕ ಭಾಗದ ಯುವಕ ಯುವತಿಯರು ಉದ್ಯಮಿಗಳಾಗಲು ವರದಾನವಾಗಿ ಪರಿಣಮಿಸಲಿದೆ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಉತ್ಪನ್ನಗಳು ತಯಾರಿಸಿ ಮಾರಾಟ ಮಾಡಿ ಸ್ವತಃ ಸಮಾಜ, ಪ್ರದೇಶ, ದೇಶವನ್ನು ಸಂಪತ್ಭರಿತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಲಿಂಗಮೂರ್ತಿ, ನಿರ್ಮಲಾ ಕೆಳಮನಿ, ಸ್ವಾವಲಂಬಿ ಭಾರತ ಅಭಿಯಾನದ ಸದಸ್ಯರು ಹಾಗೂ ಶ್ರೀ ಶಕ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಸದಸ್ಯರು ಇದ್ದರು.
ವರದಿ -ಎಮ್.ಬಿ ಹಡಪದ. ಸುಗೂರ ಎನ್