352 total views
ಹುಣಸೂರು, ಸಂಭಂಧಿಕರ ಹುಟ್ಟುಹಬ್ಬ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ವಿನಯ್ (22) ಮೃತ ದುರ್ದೈವಿ.ಅಂತ್ಯಕ್ರಿಯೆಗೆ ಸಿದ್ದಪಡಿಸುತ್ತಿದ್ದ ವೇಳೆ ವಿನಯ್ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ.ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆ ಚಿಲಕುಂದ ಗ್ರಾಮದಲ್ಲಿ ಸಂಭಂಧಿಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ವಿನಯ್ ಭಾಗವಹಿಸಿದ್ದ.ತನ್ನ ತಾಯಿ ಬಳಿ ಒಂದು ಸಾವಿರ ಪಡೆದು ತೆರಳಿದ್ದ ವಿನಯ್ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ.ರಾತ್ರಿ ಮನೆಗೆ ಹಿಂದಿರುಗಿದ ವಿನಯ್ ಬೆಳಿಗ್ಗೆ ಶವವಾಗಿದ್ದ.ಕತ್ತಿನಲ್ಲಿ ಸೀರೆ ಸುತ್ತಿಕೊಂಡಿದ್ದ ಸ್ಥತಿಯಲ್ಲಿ ವಿನಯ್ ಶವ ಪತ್ತೆಯಾಗಿತ್ತು.ಸಹಜ ಸಾವೆಂದು ತಿಳಿದ ಪೋಷಕರು ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕಡಿದ್ದರು.ಮೃತದೇಹಕ್ಕೆ ಸಂಪ್ರದಾಯವಾಗಿ ಸ್ನಾನ ಮಾಡಿಸುವ ವೇಳೆ ಬೆನ್ನಿನಲ್ಲಿ ಗಾಯದ ಗುರುತು ಪತ್ತೆಯಾಗಿದೆ.ಬಲಗಾಲಿನಲ್ಲಿ ಕಚ್ಚಿದ ಹಲ್ಲಿನ ಗುರುತು ಕಂಡು ಬಂದಿದೆ.ಕೂಡಲೇ ಎಚ್ಚೆತ್ತ ಪೋಷಕರು ಅನುಮಾನ ವ್ಯಕ್ತಪಡಿಸಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ…